Back to Top

“ನಾನೊಬ್ಬಳಿಗೆ ಅಲ್ಲ, ಇತರ ನಟಿಯರಿಗೂ ಸ್ಕ್ರಿಪ್ಟ್‌ ಕೊರತೆ!” – ಕನ್ನಡ ಚಿತ್ರರಂಗದ ನಿಜ ಸ್ಥಿತಿ ಬಗ್ಗೆ ಖುಷಿ ರವಿ ಬಿಚ್ಚಿಟ್ಟ ಸತ್ಯ

SSTV Profile Logo SStv July 22, 2025
ಕನ್ನಡ ಚಿತ್ರರಂಗದ ನಿಜ ಸ್ಥಿತಿ ಬಗ್ಗೆ ಖುಷಿ ರವಿ ಬಿಚ್ಚಿಟ್ಟ ಸತ್ಯ
ಕನ್ನಡ ಚಿತ್ರರಂಗದ ನಿಜ ಸ್ಥಿತಿ ಬಗ್ಗೆ ಖುಷಿ ರವಿ ಬಿಚ್ಚಿಟ್ಟ ಸತ್ಯ

ದಿಯಾ’ ಸಿನಿಮಾ ಮೂಲಕ ಮನೆಮಾತಾದ ನಟಿ ಖುಷಿ ರವಿ ತಮ್ಮ ಇತ್ತೀಚಿನ ಯಶಸ್ವಿ ವೆಬ್‌ ಸಿರೀಸ್ ‘ಅಯ್ಯನ ಮನೆ’ ಬಳಿಕ ಮತ್ತೊಮ್ಮೆ ಸುದ್ದಿಯಲ್ಲಿ ಇದ್ದರೂ, ಕನ್ನಡ ಚಿತ್ರರಂಗದಲ್ಲಿ ಅವಕಾಶಗಳ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಖುಷಿ, “ಅಯ್ಯನ ಮನೆ ಸೀರೀಸ್ ಎಲ್ಲಾ ಭಾಷೆಗಳಿಗೂ ಡಬ್ ಆಗಿ ಸಕ್ಸೆಸ್ ಆಗಿದ್ದು, ಬೇರೆ ಭಾಷೆಗಳಿಂದ ಆಫರ್ಸ್ ಬರುತ್ತಿವೆ. ಆದರೆ, ಕನ್ನಡದಲ್ಲಿ ಮಾತ್ರ ಒಂದೂ ಸ್ಕ್ರಿಪ್ಟ್ ಕೇಳಿಲ್ಲ” ಎಂದು ನೇರವಾಗಿ ಹೇಳಿದರು. ಅವರು ಮುಂದೆ ಹೇಳಿದರು: “ಇದು ನನ್ನೊಬ್ಬಳಿಗಲ್ಲ, ಇತರ ನಟಿಯರಿಗೂ ಈ ಸ್ಥಿತಿ ಇದೆ. ನಮ್ಮಲ್ಲಿ ರೈಟರ್ಸ್‌ಗಳ ಕೊರತೆ ಇದೆ. ಬೇರೆ ಭಾಷೆಗಳಲ್ಲಿ ರೈಟರ್ಸ್ ಹೀರೋ-ಹೀರೋಯಿನ್ ಮಟ್ಟಿಗೆ ಪ್ರಾಮುಖ್ಯತೆಯಲ್ಲಿದ್ದಾರೆ. ನಮ್ಮ ಕನ್ನಡ ಚಿತ್ರರಂಗಕ್ಕೂ ರೈಟರ್ಸ್ ಬೆಳೆಬೇಕಾಗಿದೆ.”

ಆದರೂ ಖುಷಿ ತಮ್ಮ ನಿಜವಾದ ನಿಷ್ಠೆ ಕನ್ನಡಕ್ಕೆ ಎಂಬುದನ್ನೂ ಸ್ಪಷ್ಟಪಡಿಸಿದರು: “ಅವಕಾಶ ಎಲ್ಲಿಂದ ಸಿಕ್ಕರೂ ನಾನು ಕನ್ನಡ ಸಿನಿಮಾ ನನ್ನ ಮೊದಲ ಆದ್ಯತೆ ಎನ್ನುವುದನ್ನು ಬಿಟ್ಟುಕೊಡುವದಿಲ್ಲ.” ಒಟ್ಟಾರೆ, ಖುಷಿ ರವಿ ಹೇಳಿಕೆಗಳು ಕನ್ನಡ ಚಿತ್ರರಂಗದ ಪ್ರಸ್ತುತ ಸ್ಥಿತಿಗೆ ನಿಲ್ಲುತ್ತವೆ ಮತ್ತು ಬದಲಾಗಬೇಕಾದ ಅಂಶಗಳನ್ನು ಬೆಳಗಿನೆರೆವಂತೆ ತೋರಿಸುತ್ತವೆ.