ಕನ್ನಡ ಭಾಷೆ ಬಗ್ಗೆ ಮತ್ತೆ ಮಾತಾಡಬೇಡಿ: ಕಮಲ್ ಹಾಸನ್‌ಗೆ ಕೋರ್ಟ್‌ನಿಂದ ಕಠಿಣ ನಿರ್ಬಂಧ!


‘ಥಗ್ ಲೈಫ್’ ಚಿತ್ರದ ಪ್ರಚಾರದ ವೇಳೆ "ಕನ್ನಡ ತಮಿಳಿನಿಂದ ಹುಟ್ಟಿದ ಭಾಷೆ" ಎಂಬ ವಿವಾದಾತ್ಮಕ ಹೇಳಿಕೆಯಿಂದ ನಟ ಕಮಲ್ ಹಾಸನ್ ಪರ ವಿರೋಧದ ಗಾಳಿ ಎದ್ದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು 31ನೇ ಸಿಟಿ ಸಿವಿಲ್ ಕೋರ್ಟ್ ಕಮಲ್ ಹಾಸನ್ ಅವರಿಗೆ ಕನ್ನಡ ನಾಡು, ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡದಂತೆ ನಿರ್ಬಂಧ ಹೇರಿದೆ.
ಈ ನಿರ್ಣಯ ಕನ್ನಡ ಸಾಹಿತ್ಯ ಪರಿಷತ್ ಸಲ್ಲಿಸಿದ ಅರ್ಜಿಯ ಮೇರೆಗೆ ಹೊರಬಂದಿದ್ದು, ಕಮಲ್ ಈ ನಿರ್ಬಂಧವನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ. ಹಿಂದೆ ಈ ಹೇಳಿಕೆಯ ಪರಿಣಾಮವಾಗಿ ‘ಥಗ್ ಲೈಫ್’ ಚಿತ್ರಕ್ಕೆ ಕರ್ನಾಟಕದಲ್ಲಿ ಥಿಯೇಟರ್ ಬಿಡುಗಡೆ ಸಿಕ್ಕಿರಲಿಲ್ಲ. ಇದೀಗ ಈ ಚಿತ್ರ ಜುಲೈ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಿದೆ.
ವಿವಾದದ ನಡುವೆಯೂ ಕನ್ನಡದಲ್ಲಿ ಚಿತ್ರದ ಓಟಿಟಿ ಪ್ರಸಾರ ನಡೆಯುತ್ತಿರುವುದು ವಿಶೇಷ. ಆದರೆ, ಕಮಲ್ ಹಾಸನ್ ಅವರ ಮುಂದಿನ ಹೇಳಿಕೆಗಳತ್ತ ಕನ್ನಡಿಗರ ಕಣ್ಣು ಗಟ್ಟಿಯಾಗಿಯೇ ಇದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
