Back to Top

ಚಂದನವನ ಕಣ್ಣೀರು: ಕಲಾ ಸರಸ್ವತಿ ಬಿ. ಸರೋಜಾದೇವಿಗೆ ಇವತ್ತು ಹುಟ್ಟೂರಿನಲ್ಲಿ ಅಂತ್ಯಕ್ರಿಯೆ..

SSTV Profile Logo SStv July 15, 2025
ಕಲಾ ಸರಸ್ವತಿ ಬಿ. ಸರೋಜಾದೇವಿಗೆ ಇವತ್ತು ಹುಟ್ಟೂರಿನಲ್ಲಿ ಅಂತ್ಯಕ್ರಿಯೆ
ಕಲಾ ಸರಸ್ವತಿ ಬಿ. ಸರೋಜಾದೇವಿಗೆ ಇವತ್ತು ಹುಟ್ಟೂರಿನಲ್ಲಿ ಅಂತ್ಯಕ್ರಿಯೆ

ಚತುರ್ಭಾಷಾ ತಾರೆ, ಅಭಿನಯ ಸರಸ್ವತಿ ಬಿ. ಸರೋಜಾ ದೇವಿಯವರ ಅಗಲಿಕೆಯಿಂದ ಇಡೀ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ಹಿರಿಯ ನಟಿ ಸರೋಜಾದೇವಿಗೆ ಇಂದು (ಜುಲೈ 15) ಹುಟ್ಟೂರಾದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವರದಲ್ಲಿ ಬೆಳಗ್ಗೆ 11.30ಕ್ಕೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ.

ಅವರ ಅಂತಿಮ ದರ್ಶನಕ್ಕಾಗಿ ನಟ ಶಿವರಾಜಕುಮಾರ್, ಉಪೇಂದ್ರ, ಜಗ್ಗೇಶ್, ತಾರಾ, ಶೃತಿ, ಮಾಲಾಶ್ರೀ, ತಮಿಳು ನಟ ವಿಶಾಲ್‌, ಕಾರ್ತಿ, ಅರ್ಜುನ್ ಸರ್ಜಾ ಸೇರಿದಂತೆ ಅನೇಕರು ಆಗಮಿಸಿದ್ದರು. ನಟ ಕಾರ್ತಿ "ತಿಂಗಳಿಗೆ ಒಮ್ಮೆ ಅವರು ಕರೆಮಾಡುತ್ತಿದ್ದರು" ಎಂದರೆ, ವಿಶಾಲ್ "ಅವರಿಗೆ ರೀಪ್ಲೇಸ್ ಇಲ್ಲ" ಎಂದಿದ್ದಾರೆ.

ತಮಿಳು, ತೆಲುಗು, ಹಿಂದಿ, ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿಯಾದ ಹೆಸರು ಗಳಿಸಿದ್ದ ಸರೋಜಾ ದೇವಿಯ ಅಗಲಿಕೆಯಿಂದ ಚಿತ್ರರಂಗ ಒಂದು ಮಹಾನ್ ನಟಿಯನ್ನು ಕಳೆದುಕೊಂಡಿದೆ. ಅವರಿಗೆ ಸಲ್ಲಿಸಿರುವ ನೇತ್ರದಾನ ಕೂಡ ಅವರ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಕನ್ನಡದ ಮೊಟ್ಟ ಮೊದಲ ಮಹಿಳಾ ಸೂಪರ್‌ಸ್ಟಾರ್ ಅವರನ್ನು ನೆನೆದು ಚಿತ್ರರಂಗ ಕಂಬನಿಮಿಡಿದಿದೆ.