Back to Top

‘ಕೆ 47’ ಮುಹೂರ್ತಕ್ಕೆ ಕಿಚ್ಚ ಸುದೀಪ್ ಹೆಜ್ಜೆ – ತಮಿಳುನಾಡಿನಲ್ಲಿ ನಡೆದ ಭರ್ಜರಿ ಶುಭಾರಂಭ!

SSTV Profile Logo SStv July 7, 2025
‘ಕೆ 47’ ಮುಹೂರ್ತಕ್ಕೆ ಕಿಚ್ಚ ಸುದೀಪ್ ಹೆಜ್ಜೆ
‘ಕೆ 47’ ಮುಹೂರ್ತಕ್ಕೆ ಕಿಚ್ಚ ಸುದೀಪ್ ಹೆಜ್ಜೆ

ಕಿಚ್ಚ ಸುದೀಪ್ ಅವರು ತಮ್ಮ ಮುಂದಿನ ಚಿತ್ರ ‘ಕೆ 47’ (ತಾತ್ಕಾಲಿಕ ಶೀರ್ಷಿಕೆ) ಮುಹೂರ್ತವನ್ನು ಇತ್ತೀಚೆಗೆ ತಮಿಳುನಾಡಿನಲ್ಲಿ ನೆರವೇರಿಸಿದ್ದಾರೆ. 'ಮ್ಯಾಕ್ಸ್' ಚಿತ್ರದ ಭರ್ಜರಿ ಯಶಸ್ಸಿನ ಬಳಿಕ, ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಮತ್ತೆ ಒಂದಾಗಿ ಈ ಹೊಸ ಪ್ರಾಜೆಕ್ಟ್‌ನಲ್ಲಿ ಕೈ ಜೋಡಿಸಿದ್ದಾರೆ.

ಮುಹೂರ್ತ ಕಾರ್ಯಕ್ರಮದಲ್ಲಿ ಸುದೀಪ್ ಪತ್ನಿ ಪ್ರಿಯಾ ಸಹ ಭಾಗಿಯಾಗಿದ್ದು, ಅವರ ಹಾಜರಾತಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. 'ಕೆ 47' ಸಿನಿಮಾವನ್ನು ಕೇವಲ 6 ತಿಂಗಳಲ್ಲಿ ಪೂರ್ಣಗೊಳಿಸಿ, ಡಿಸೆಂಬರ್ 25 ರಂದು ಬಿಡುಗಡೆ ಮಾಡುವ ಗುರಿಯೊಂದಿಗೆ ತಂಡ ಶೂಟಿಂಗ್ ಆರಂಭಿಸಿದೆ.

ಈ ಸಿನಿಮಾದ ಜೊತೆ ಸುದೀಪ್ 'ಬಿಲ್ಲ ರಂಗ ಬಷಾ' (BRB) ಸಿನಿಮಾದಲ್ಲೂ ತೊಡಗಿಸಿಕೊಂಡಿದ್ದು, ಅದಕ್ಕೂ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಇದೆ. 'ಕೆ 47' ಸಿನಿಮಾದ ಮುಹೂರ್ತ ಫೋಟೋಗಳು ಈಗಾಗಲೇ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿವೆ.