Back to Top

‘ಕೆ 47’ ಚಿತ್ರ ಘೋಷಣೆ ಮಾಡಿದ ಕಿಚ್ಚ ಸುದೀಪ್ – ಡಿಸೆಂಬರ್​ನಲ್ಲಿ ಸಿನಿಮಾ ರಿಲೀಸ್

SSTV Profile Logo SStv July 5, 2025
‘ಕೆ 47’ ಚಿತ್ರ ಘೋಷಣೆ ಮಾಡಿದ ಕಿಚ್ಚ ಸುದೀಪ್
‘ಕೆ 47’ ಚಿತ್ರ ಘೋಷಣೆ ಮಾಡಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅವರು ತಮ್ಮ ಹೊಸ ಸಿನಿಮಾ ‘ಕೆ 47’ ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಜುಲೈ 7ರಿಂದ ಶೂಟಿಂಗ್ ಆರಂಭವಾಗಲಿದ್ದು, ಕೇವಲ ಆರು ತಿಂಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಡಿಸೆಂಬರ್ 25ರಂದು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ.

ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ನಿರ್ದೇಶನದಲ್ಲಿ ಸುದೀಪ್ ಈ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಜೋಡಿಯ ‘ಮ್ಯಾಕ್ಸ್’ ಸಿನಿಮಾ ಹಿಂದೆಗೆ ಭರ್ಜರಿ ಯಶಸ್ಸು ಕಂಡಿತ್ತು. ‘ಕೆ 47’ ಕೂಡ ಅದೇ ಪ್ರಮಾಣದ ನಿರೀಕ್ಷೆ ಹುಟ್ಟಿಸಿದೆ.

ಈ ನಡುವೆ ಸುದೀಪ್‌ ಅವರು ‘ಬಿಲ್ಲ ರಂಗ ಬಾಷ’ ಚಿತ್ರದ ಶೂಟ್ ಮತ್ತು ಬಿಗ್ ಬಾಸ್ ನಿರೂಪಣೆಯಲ್ಲೂ ಬ್ಯುಸಿಯಾಗಿದ್ದಾರೆ. “ಈ ಬಾರಿ ಯಾವುದೇ ವಾರಾಂತ್ಯವಿಲ್ಲ – ದಿನವೂ ಕೆಲಸ ಮಾಡೋ ಪ್ಲಾನ್ ಇದೆ. ಡಿಸೆಂಬರ್ 25ಕ್ಕೆ ಸಿನಿಮಾ ಥಿಯೇಟರ್‌ಗಳಿಗೆ ತಲುಪಲೇಬೇಕು ಎಂಬ ನಿಶ್ಚಯ ಮಾಡಿಕೊಂಡಿದ್ದೇವೆ,” ಎಂದು ಸುದೀಪ್ ಹೇಳಿದ್ದಾರೆ.

ಸ್ಟಾರ್ ಹೀರೋ ಸಿನಿಮಾವನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವ ಸವಾಲನ್ನು ಸುದೀಪ್ ಸ್ವೀಕರಿಸಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.