Back to Top

ಧರ್ಮಸ್ಥಳ "ಸೌಜನ್ಯಾ" ಕಥೆ ಹೆಸರು ಬದಲಾಯಿಸಿ "ಜಸ್ಟಿಸ್ ಫಾರ್ ಸೌಮ್ಯ" ಸಿನಿಮಾ ಮಾಡ್ತಿದ್ದಾರಾ ನಿರ್ದೇಶಕ ಟೈಗರ್ ನಾಗ್ !!

SSTV Profile Logo SStv July 7, 2025
"ಜಸ್ಟಿಸ್ ಫಾರ್ ಸೌಮ್ಯ" ಸಿನಿಮಾ ಮಾಡ್ತಿದ್ದಾರಾ ನಿರ್ದೇಶಕ ಟೈಗರ್ ನಾಗ್
"ಜಸ್ಟಿಸ್ ಫಾರ್ ಸೌಮ್ಯ" ಸಿನಿಮಾ ಮಾಡ್ತಿದ್ದಾರಾ ನಿರ್ದೇಶಕ ಟೈಗರ್ ನಾಗ್

ಹೌದು ! ಹೀಗೊಂದು ಗುಮಾನಿ  ಚಂದನವನದಲ್ಲಿ  ಶುರುವಾಗಿದೆ. "ಜಸ್ಟೀಸ್ ಫಾರ್ ಸೌಮ್ಯ" ಈ ಶೀರ್ಷಿಕೆಯನ್ನು ಕೇಳಿದ ತಕ್ಷಣವೇ ನೆನಪಿಗೆ ಬರುವುದು ಧರ್ಮಸ್ಥಳದಲ್ಲಿ 2012 ರಲ್ಲಿ ಅತ್ಯಾಚಾರಕ್ಕೊಳಗಾಗಿ ನಿಗೂಢವಾಗಿ ಕೊಲೆಯಾದ ಸಹೋದರಿ ಸೌಜನ್ಯ.

ಪ್ರಕರಣದ ನಿಜವಾದ ಆರೋಪಿಗಳು ಯಾರೆಂದು ಇನ್ನೂ ತಿಳಿದಿಲ್ಲ.  ಇಂಥ ಜಟಿಲ ಪ್ರಕರಣ ಜೀವಂತವಾಗಿರುವಾಗಲೇ ಸಾಮಾಜಿಕ ಹೋರಾಟಗಾರ, ನಟ , ನಿರ್ದೇಶಕ ಟೈಗರ್ ನಾಗ್ "ಜಸ್ಟೀಸ್ ಫಾರ್ ಸೌಮ್ಯ" ಎಂದು ತಮ್ಮ ಚಿತ್ರಕ್ಕೆ ಶೀರ್ಷಿಕೆ ಇಟ್ಟು ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಮುಗಿಸಿದ್ದಾರೆ. ಕೆಲವು ದೃಶ್ಯಗಳನ್ನು ಮರು ಚಿತ್ರೀಕರಿಸುವ ಯೋಚನೆಯಲ್ಲಿದ್ದಾರೆ. ಆದಕ್ಕೂ ಮುನ್ನ ತಮ್ಮ ಚಿತ್ರದಲ್ಲಿ ದೇಶಾದ್ಯಂತ ಅತ್ಯಾಚಾರ ಪ್ರಕರಣಗಳ ವಿರುದ್ಧದ ಹೋರಾಟಗಳಿಗೆ ಕಿಚ್ಚು ಹಚ್ಚುವ ಸಾಹಿತ್ಯ ಇರುವ  'ಧಗ ಧಗ ಉರಿಯುತ್ತಿದೆ ಜ್ವಾಲೆ ' ಎಂಬ ತಮ್ಮ "ಜಸ್ಟೀಸ್ ಫಾರ್ ಸೌಮ್ಯ" ಚಿತ್ರದ ಪ್ರಥಮ ಲಿರಿಕಲ್ ವಿಡಿಯೋ ಸಾಂಗ್ ಅನ್ನು ತಮ್ಮ ' ಬಿ' ಮ್ಯೂಸಿಕ್ ಯು ಟ್ಯೂಬ್ ಚಾನಲ್ ಅಲ್ಲಿ ಬಿಡುಗಡೆ ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ನೆರವಂತಿಕೆ ಯಿಂದ ಹೋರಾಟ ಮಾಡುತ್ತಾ ಬಂದಿರುವ ನಿರ್ದೇಶಕ ಟೈಗರ್ ನಾಗ್ ಸಿನಿಮಾದಲ್ಲೂ ಹೋರಾಟ ಮಾಡಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಪಿನ್ ಛಾಯಾಗ್ರಹಣ, ಕೆ. ಮಂಜು ಕೋಟೆಕೆರೆ ಸಂಭಾಷಣೆ ಒದಗಿಸಿರುವ ಈ ಚಿತ್ರಕ್ಕೆ ಟೈಗರ್ ನಾಗ್ ಸಂಗೀತ ನೀಡಿ, ಗೀತರಚನೆ ಸಹ ಮಾಡಿದ್ದಾರೆ. ಈಗ ಬಿಡುಗಡೆಯಾಗಿರುವ ಹೋರಾಟದ ಹಾಡನ್ನು ತಾವೇ ಬರೆದು, ಹಾಡಿರುವ ಟೈಗರ್ ನಾಗ್, ಹಾಡಿನಲ್ಲೂ ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ. ಚಿತ್ರದ ತಾರಾಬಳಗದ ಮಾಹಿತಿ ಸದ್ಯಕ್ಕೆ ಬಿಡುಗಡೆ ಮಾಡದೆ ಗೌಪ್ಯವಾಗಿಟ್ಟಿದ್ದು ಚಿತ್ರದ ಬಿಡುಗಡೆ ಸಮಯದಲ್ಲಿ ನೀಡುವುದಾಗಿ ರಿವೀಲ್ ಮಾಡುವುದಾಗಿ ನಿರ್ದೇಶಕ ಟೈಗರ್ ನಾಗ್ ತಿಳಿಸಿದ್ದಾರೆ. ಚಿತ್ರದ ಪರ ವಿರೋಧದ ಬಿಸಿ ಬಿಸಿ ಚರ್ಚೆಗಳು ಗಾಂಧಿನಗರದಲ್ಲಿ ಶುರುವಾಗಿವೆ