ಜಯಲಲಿತಾ ಅವರಿಗೆ ಆತ್ಮೀಯ ಗೆಳತಿಯಾಗಿದ್ದ ಸರೋಜಾ ದೇವಿ – ತಲೈವಿಗೆ ನೀಡಿದ್ದ ಅಮೂಲ್ಯ ಸಲಹೆ


87ನೇ ವಯಸ್ಸಿನಲ್ಲಿ ವಿಧಿವಶರಾದ ಅಭಿನಯ ಸರಸ್ವತಿ ಬಿ. ಸರೋಜಾ ದೇವಿ, ಭಾರತೀಯ ಚಿತ್ರರಂಗದ ಐತಿಹಾಸಿಕ ಹೆಸರಾಗಿದ್ದರು. ಕೇವಲ ನಟನೆ ಮಾತ್ರವಲ್ಲ, ಅವರು ತಮ್ಮ ವ್ಯಕ್ತಿತ್ವದಿಂದ ಕೂಡ ದಕ್ಷಿಣ ಭಾರತದ ಬಹುಮಾನ್ಯ ಕಲಾವಿದೆಯಾಗಿ ಗುರುತಿಸಿಕೊಂಡವರು. ಈ ಹೆಗ್ಗಳಿಕೆಗೆ ಇನ್ನೊಂದು ಪುಟ ಸೇರ್ಪಡೆಯಾದುದು ಅವರ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಡುವಿನ ಸ್ನೇಹದ ಮೂಲಕ. ಸ್ನೇಹಕ್ಕೂ ಕಲೆಗೆ ಮಿತಿಯಿರಲಿಲ್ಲ, ಹಳೆಯ ಸಂದರ್ಶನವೊಂದರಲ್ಲಿ ಸರೋಜಾ ದೇವಿ ಅವರು ಮಾತನಾಡುತ್ತಾ, "ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ರೂ, ತಾವು ನನಗೆ ಹಲವಾರು ಬಾರಿ ಕರೆ ಮಾಡುತ್ತಿದ್ದರು. ನಾವು ಒಳ್ಳೆಯ ಗೆಳತಿಯರು" ಎಂದಿದ್ದರು. ಚಿತ್ರರಂಗದಲ್ಲಿ ಜತೆಗೆ ಕೆಲಸ ಮಾಡದಿದ್ದರೂ, ಇಬ್ಬರ ಮಧ್ಯೆ ಇದ್ದ ಬಾಂಧವ್ಯ ಗಾಢವಾಗಿತ್ತು.
ಜಯಲಲಿತಾ ತಮ್ಮ ನೆಚ್ಚಿನ ಚಿತ್ರ ಎಂದಾಗ 'ಪುಥಿಯ ಪರವೈ' ಎಂದು ಹೇಳಿದ್ದನ್ನು ಸರೋಜಾ ದೇವಿ ಸಂತಸದೊಂದಿಗೆ ಹಂಚಿಕೊಂಡಿದ್ದರು. ಆ ಚಿತ್ರದ ಕಥೆ ಮತ್ತು ತಮ್ಮ ಪಾತ್ರವನ್ನು ಜಯಲಲಿತಾ ಬೆಸೆಯಂತೆ ಮೆಚ್ಚಿದ್ರಂತೆ. ಒಮ್ಮೆ ಸಂಭಾಷಣೆಯ ವೇಳೆ ಜಯಲಲಿತಾ ಸರೋಜಾ ದೇವಿಗೆ, “ನೀವು ಈಗ ಉನ್ನತ ಸ್ಥಾನದಲ್ಲಿದ್ದೀರಿ. ಯಾವುದೇ ಕಾರಣಕ್ಕೂ ಅಲ್ಲಿಂದ ಕೆಳಗೆ ಬಾರದಿರಿ. ಸಣ್ಣ ಪಾತ್ರಗಳಿಗೆ ಓಡಬೇಡಿ. ನೀವು ಎಂತಹ ಮಟ್ಟಕ್ಕೆ ತಲುಪಿದ್ದೀರೋ, ಅಂತೆಯೇ ಉಳಿಯಿರಿ” ಎಂದು ಸಲಹೆ ನೀಡಿದ್ದರು. ಈ ಮಾತು ನಟಿ ಸರೋಜಾ ದೇವಿಗೆ ಸ್ಪಷ್ಟ ಮಾರ್ಗದರ್ಶನವಾಗಿ ಉಳಿದಿದೆ. ಈ ಮಾತಿಗೆ ಪೂರಕವಾಗಿ, ಸರೋಜಾ ದೇವಿ ಅವರು 2000ರ ನಂತರ ಮಾತ್ರ ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ್ದರು. ಅವರು ಕೊನೆಯ ಬಾರಿಗೆ ಸೂರ್ಯ ಅಭಿನಯದ ‘ಆಧವನ್’ (2009) ಹಾಗೂ ಪುನೀತ್ ರಾಜ್‌ಕುಮಾರ್ ನಟನೆಯ ‘ನಟಸಾರ್ವಭೌಮ’ (2019)ನಲ್ಲಿ ಮಾತ್ರ ಕಾಣಿಸಿಕೊಂಡರು.
ದಕ್ಷಿಣ ಭಾರತದ ಚಿತ್ರರಂಗದ ಇಬ್ಬರು ಶಕ್ತಿ ಸಾಧಕಿಯರ ಸ್ನೇಹ, ಸರೋಜಾ ದೇವಿ ಮತ್ತು ಜಯಲಲಿತಾ – ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸ್ತ್ರೀ ಶಕ್ತಿಯ ಸಂಕೇತವಾಗಿದ್ದವರು. ಓರ್ವ ನಟಿಯಾಗಿ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದರೆ, ಮತ್ತೊಬ್ಬ ನಟಿ ರಾಜಕಾರಣಿಯಾಗಿ ತಲೈವಿ ಎನಿಸಿಕೊಂಡಿದ್ದವರು. ಅವರ ಸ್ನೇಹವು ಬೇರೆಯವರಿಗೆ ಮಾದರಿಯಾಗುವಂತದ್ದು. ಬಿ. ಸರೋಜಾ ದೇವಿ ಅವರು ಚಿತ್ರರಂಗಕ್ಕೆ ಕೊಟ್ಟ ಕೊಡುಗೆಷ್ಟೇ ಅಲ್ಲ, ಅವರು ಬೆಸೆದುಕೊಂಡ ಸಂಬಂಧಗಳು, ಸ್ನೇಹಗಳು ಸಹ ಸದಾ ನೆನಪಾಗುತ್ತವೆ. ಜಯಲಲಿತಾ ಅವರ ಜೊತೆಗಿನ ಆತ್ಮೀಯ ಸಂಬಂಧ ಮತ್ತು ಆ ಸಂಬಂಧದ ಮೌಲ್ಯಮಯ ಸಂಭಾಷಣೆಗಳು ಇಂದಿಗೂ ಶ್ರದ್ಧಾ, ಶಿಸ್ತಿನ ಮತ್ತು ನಿಷ್ಠೆಯ ಪ್ರತೀಕವಾಗಿವೆ ಅಭಿನಯ ಸರಸ್ವತಿಗೆ ನಮನಗಳು.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
