Back to Top

ಜನ್ಮದಿನದ ಸಂಭ್ರಮದಲ್ಲಿ ರಾಜ್ ಬಿ ಶೆಟ್ಟಿ – ರಾಜ್ ಬಿ ಶೆಟ್ಟಿಗೆ ಈಗ ವಯಸ್ಸು ಎಷ್ಟು?

SSTV Profile Logo SStv July 5, 2025
ಜನ್ಮದಿನದ ಸಂಭ್ರಮದಲ್ಲಿ ರಾಜ್ ಬಿ ಶೆಟ್ಟಿ
ಜನ್ಮದಿನದ ಸಂಭ್ರಮದಲ್ಲಿ ರಾಜ್ ಬಿ ಶೆಟ್ಟಿ

ಚಲನಚಿತ್ರರಂಗದ ಬಹುಮುಖ ಪ್ರತಿಭೆ ರಾಜ್ ಬಿ ಶೆಟ್ಟಿ, ಜುಲೈ 5 ರಂದು 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಲೆಯ ಕೂದಲು ಕಡಿಮೆಯಾಗಿದ್ದರೂ, ವಯಸ್ಸು 50 ಕ್ಕೆ ಪಕ್ಕದಲ್ಲಿ ಎಂಬ ಭ್ರಮೆಗೆ ‘ಒಂದು ಮೊಟ್ಟೆಯ ಕಥೆ’ ಮೂಲಕ ಉತ್ತರಿಸಿದ ರಾಜ್‌ ಈಗ ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಇವರು ಸದ್ಯವೂ ಬ್ಯಾಚುಲರ್‌ ಆಗಿದ್ದು, ಮದುವೆ ಬಗ್ಗೆ ಕನಸು ಇಟ್ಟುಕೊಂಡಿರುವರು. ನಾಯಿಗಳಿಗೆ, ಅದರಲ್ಲೂ ದೇಶೀ ನಾಯಿಗಳಿಗೆ ಇವರು ತೀರಾ ಇಷ್ಟವಿರುವದು ಖಚಿತ. ತಮ್ಮ ಪೆಟ್ಸ್‌ಗಳ ಜೊತೆಗೆ ಫೋಟೋ ಶೂಟ್‌ ಮಾಡಿಸಿಕೊಂಡು ಹಂಚಿಕೊಳ್ಳುವ ಅಂಶಗಳು ಅಭಿಮಾನಿಗಳಿಗೆ ಮೆಚ್ಚುಗೆ ತಂದಿವೆ.

ರಾಜ್ ಬಿ ಶೆಟ್ಟಿ ಕೇವಲ ನಟ ಮಾತ್ರವಲ್ಲ, ಕಥೆಗಾರ, ನಿರ್ದೇಶಕರೂ ಹೌದು. 'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಎಲ್ಲರ ಗಮನ ಸೆಳೆದ ಅವರು, ಈಗ '45' ಎಂಬ ಕನ್ನಡದ ಭರ್ಜರಿ ಬಹುಬಜೆಟ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಲಿವುಡ್‌ನ ಟರ್ಬೊ, ರುಧಿರಂ ಹಾಗೂ ಕೊಂಡಾಲ ಚಿತ್ರಗಳ ಮೂಲಕ ರಾಜ್ ಬಿ ಶೆಟ್ಟಿ ಪಾರಭಾಷಿಕರಿಗೂ ಪರಿಚಿತರಾಗಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೂ ನಿರ್ದೇಶನದ ಕೈಹಾಕಿದ್ದ ಅವರು, ತಮ್ಮದೇ ಆದ ಶೈಲಿಯಲ್ಲಿ ಚಲನಚಿತ್ರರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಜನ್ಮದಿನದ ಸಂದರ್ಭದಲ್ಲಿ ಅಭಿಮಾನಿಗಳು ರಾಜ್‌ಗೆ ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ!