Back to Top

ಜಾಮೀನು ಸಿಕ್ಕರೂ ಜೈಲಿನಲ್ಲೇ ರಾತ್ರಿ ಕಳೆದ ಅಲ್ಲು ಅರ್ಜುನ್ ಮುಂಜಾನೆಯೇ ಬಿಡುಗಡೆ

SSTV Profile Logo SStv December 14, 2024
ಜಾಮೀನು ಸಿಕ್ಕರೂ ಜೈಲಿನಲ್ಲೇ ರಾತ್ರಿ ಕಳೆದ ಅಲ್ಲು ಅರ್ಜುನ್
ಜಾಮೀನು ಸಿಕ್ಕರೂ ಜೈಲಿನಲ್ಲೇ ರಾತ್ರಿ ಕಳೆದ ಅಲ್ಲು ಅರ್ಜುನ್
ಜಾಮೀನು ಸಿಕ್ಕರೂ ಜೈಲಿನಲ್ಲೇ ರಾತ್ರಿ ಕಳೆದ ಅಲ್ಲು ಅರ್ಜುನ್ ಮುಂಜಾನೆಯೇ ಬಿಡುಗಡೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರನ್ನು ಡಿಸೆಂಬರ್ 13 ರಂದು ಬಂಧಿಸಲಾಗಿತ್ತು. ಈ ಘಟನೆ ಟಾಲಿವುಡ್‌ನಲ್ಲಿ ಭಾರಿ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಪ್ರೀಮಿಯರ್ ಶೋ ಸಮಯದಲ್ಲಿ ಅಭಿಮಾನಿಗಳ ಉತ್ಸಾಹದಿಂದ ಥಿಯೇಟರ್ ಬಳಿ ಕಾಲ್ತುಳಿತ ಉಂಟಾಗಿ, ರೇವತಿ ಎಂಬ ಮಹಿಳೆ ಮೃತಪಟ್ಟಿದ್ದು, ಈ ಪ್ರಕರಣದಲ್ಲಿ ರೇವತಿ ಪತಿ ನೀಡಿದ ದೂರು ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್‌ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರಿಗೆ ಎ11 ಆರೋಪಿ ಸ್ಥಾನ ನೀಡಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಆಜ್ಞೆ ಪಡೆಯಿದ್ದರು. ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದರೂ, ಕೈದಿಗಳ ಬಿಡುಗಡೆ ಸಂಬಂಧಿತ ಪ್ರಕ್ರಿಯೆ ತಡವಾದ ಕಾರಣ, ಒಂದು ರಾತ್ರಿಯಿಡೀ ಜೈಲಿನಲ್ಲಿ ಉಳಿಯಬೇಕಾಯಿತು. ಇಂದು ಮುಂಜಾನೆ ಅವರನ್ನು ಬಿಡುಗಡೆ ಮಾಡಲಾಗಿದೆ. ಅಲ್ಲು ಅರ್ಜುನ್ ವಿರುದ್ಧದ ಕ್ರಮ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ. “ಮೂರುದಶಕಗಳ ಚಿತ್ರರಂಗ ಜೀವನದಲ್ಲಿ ಮಾದರಿಯಾಗಿ ಬಾಳಿದ ನಟನನ್ನು ಬಂಧಿಸುವ ಅವಶ್ಯಕತೆ ಏನು?” ಎಂಬ ಪ್ರಶ್ನೆ ಅಭಿಮಾನಿಗಳು ಮತ್ತು ಟಾಲಿವುಡ್ ಬೆಂಬಲಿಗರೊಳಗೆ ಮೂಡಿದೆ. ಈ ಘಟನೆ ಅಲ್ಲು ಅರ್ಜುನ್ ಅವರ ಖ್ಯಾತಿಗೆ ತೀವ್ರ ಹೊಡೆತ ನೀಡಿದರೂ, ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲ ಅವರು ಪ್ರತಿ ಕ್ಷಣದಲ್ಲೂ ಹೊಂದುತ್ತಿದ್ದಾರೆ.