Back to Top

ಜಾಕ್ವೆಲಿನ್ ಫರ್ನಾಂಡೀಸ್‌ಗೆ ಹೈಕೋರ್ಟ್‌ನಲ್ಲಿ ಶಾಕ್ – ಇಡಿ ಕೇಸ್ ರದ್ದತಿ ಅರ್ಜಿ ವಜಾ

SSTV Profile Logo SStv July 4, 2025
ಜಾಕ್ವೆಲಿನ್ ಫರ್ನಾಂಡೀಸ್‌ಗೆ ಹೈಕೋರ್ಟ್‌ನಲ್ಲಿ ಶಾಕ್
ಜಾಕ್ವೆಲಿನ್ ಫರ್ನಾಂಡೀಸ್‌ಗೆ ಹೈಕೋರ್ಟ್‌ನಲ್ಲಿ ಶಾಕ್

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ದೆಹಲಿ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆ ಎದುರಾಗಿದೆ. ₹200 ಕೋಟಿ ಆಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ವಿರುದ್ಧದ ಇಡಿ (ED) ಪ್ರಕರಣವನ್ನು ರದ್ದುಗೊಳಿಸಬೇಕು ಎಂಬ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಪ್ರಕರಣದಲ್ಲಿ ಜಾಕ್ವೆಲಿನ್, ಹಣಕಾಸು ಮೋಸದ ಆರೋಪಿ ಸುಖೇಶ್ ಚಂದ್ರಶೇಖರ್ನಿಂದ ಹಣ ಮತ್ತು ಉಡುಗೊರೆಗಳನ್ನು ಪಡೆದಿದ್ದಾರೆ ಎಂಬ ಆರೋಪವಿದೆ. ಆದರೆ, ತಾನು ಯಾವುದೇ ಅಪರಾಧದಲ್ಲಿ ತೊಡಗಿಲ್ಲ ಎಂದು ಜಾಕ್ವೆಲಿನ್ ಹೈಕೋರ್ಟ್ ಮುಂದೆ ವಾದಿಸಿದ್ದರು.

ಇಡಿಯ ವಾದದ ಪ್ರಕಾರ, ಜಾಕ್ವೆಲಿನ್ ವಿರುದ್ಧ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಪ್ರಕರಣ ಮುಂದುವರಿಯುವ ಹಂತದಲ್ಲಿದೆ. ಹೀಗಾಗಿ ಈ ಹಂತದಲ್ಲಿ ಕೇಸ್ ರದ್ದತಿ ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ಪ್ರಕರಣದಲ್ಲಿ, ಸುಖೇಶ್ ನಕಲಿ ಹಿರಿಯ ಅಧಿಕಾರಿಯಾಗಿ ತನಗೆ ಪರಿಚಯಿಸಿ, ಉದ್ಯಮಿ ಶಿವೇಂದರ್ ಸಿಂಗ್ ಪತ್ನಿ ಆದಿತಿ ಸಿಂಗ್ನಿಂದ ಹಂತ ಹಂತವಾಗಿ ₹200 ಕೋಟಿ ನಗದು ಹಾಗೂ ಆಭರಣಗಳನ್ನು ಪಡೆದುಕೊಂಡಿದ್ದ. ಆ ಹಣದ ಒಂದು ಭಾಗವನ್ನು ಜಾಕ್ವೆಲಿನ್ ಫರ್ನಾಂಡೀಸ್‌ಗೆ ನೀಡಲಾಗಿದೆ ಎಂದು ಇಡಿ ತನಿಖೆಯಲ್ಲಿ ಪತ್ತೆಹಚ್ಚಿದೆ. ಸದ್ಯ ಜಾಕ್ವೆಲಿನ್ ಫರ್ನಾಂಡೀಸ್ ಜಾಮೀನಿನಲ್ಲಿ ಹೊರಬಿದ್ದಿದ್ದು, ಕಾನೂನು ಹೋರಾಟ ಮುಂದುವರೆಯುತ್ತಿದೆ.