ಇವನನ್ನು ಹಾಕೊಂಡು ಸಿನಿಮಾ ಮಾಡ್ತೀನಿ ಅಂತಿದ್ದಾರೆ ಶಿವಣ್ಣ ಯಾರಿವನು ಹ್ಯಾಟ್ರಿಕ್ ಹೀರೋ ಮನಸ್ಸು ಗೆದ್ದವನು ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರೇ ನಿರ್ಣಾಯಕರಾಗಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋದಲ್ಲಿ ಗಿಲ್ಲಿ ನಟನ ವಿಶೇಷ ಪ್ರತಿಭೆ ಮತ್ತು ಕ್ರಿಯೇಟಿವಿಟಿಗೆ ಮಾರು ಹೋಗಿದ್ದಾರೆ. ಪ್ರಾಪರ್ಟಿ ಕಾಮಿಡಿ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಗಿಲ್ಲಿ ನಟನ ಪ್ರತಿಭೆಯನ್ನು ಹೊಗಳಿದ ಶಿವಣ್ಣ, ಈ ಬಾರಿ ವಿಶೇಷ ಮಾತು ನೀಡಿದ್ದಾರೆ. "ನಿನ್ನ ಹಾಕಿಕೊಂಡು ಒಂದು ಚಿತ್ರ ಮಾಡುತ್ತೇನೆ!" ಎಂಬ ಭರವಸೆ ನೀಡಿ, ಗಿಲ್ಲಿ ನಟನ ಜೀವನದಲ್ಲಿ ದೊಡ್ಡ ಕನಸು ಕಾಣುವಂತೆ ಮಾಡಿದ್ದಾರೆ. ಈ ಮಾತು ಕೇಳಿದ ಗಿಲ್ಲಿ ನಟ, ತಲೆಬಾಗಿ ಧನ್ಯವಾದ ಹೇಳಿ ಸಂತೋಷ ವ್ಯಕ್ತಪಡಿಸಿದರು. ಗಿಲ್ಲಿ ನಟನ ಪುಪ್ಪ-2 ಚಿತ್ರದ ಅಲ್ಲು ಅರ್ಜುನ್ ಗೆಟಪ್ ಮತ್ತು ಸಖತ್ ಡ್ಯಾನ್ಸ್ ಪ್ರದರ್ಶನ ಇಡೀ ಪ್ಯಾನೆಲ್ ಅನ್ನು ಖುಷಿಪಡಿಸಿತ್ತು. ವಿಶೇಷವಾಗಿ ಶಿವಣ್ಣ ಅವರ ಕ್ರಿಯೇಟಿವಿಟಿ ಮತ್ತು ವಿನೂತನ ಶೈಲಿಯ ದೃಷ್ಟಿಯಿಂದ ಗಿಲ್ಲಿ ನಟನ ಪ್ರತಿಭೆಯ ಪ್ರಾಮುಖ್ಯತೆಯನ್ನು ನೆನೆಸಿಕೊಂಡಿದ್ದಾರೆ. ಶಿವಣ್ಣನ ಮಾತು ಪ್ರಕಾರ "ನಿನ್ನ ನೋಡಿದ್ರೆ ಎಂತಹ ಪ್ರತಿಭಾವಂತನೀ ಅನಿಸುತ್ತದೆ. ಗ್ಯಾರಂಟಿಯಾಗಿ ನಿನ್ನ ಜೊತೆ ಒಂದು ಸಿನಿಮಾ ಮಾಡುತ್ತೇನೆ," ಎಂದು ತಿಳಿಸಿದ್ದಾರೆ. ಈ ಭರವಸೆ ಸಂಚಲನ ಸೃಷ್ಟಿಸಿದ್ದು, ಶಿವಣ್ಣ ಮತ್ತು ಗಿಲ್ಲಿ ನಟನ ಚಿತ್ರ ಯಾವಾಗ ಬಂದೀತು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇಷ್ಟರಲ್ಲೇ ಹೆಚ್ಚಾಗಿದೆ. ಗಿಲ್ಲಿ ನಟನ ಹೊಸ ಪಯಣಕ್ಕೆ ಶುಭಾಶಯಗಳು.