ಕೊಲೆ ಪ್ರಕರಣ: ಇಂದು ದರ್ಶನ್‌ಗೆ ಚಾಲೆಂಜಿಂಗ್ ಡೇ – ಸುಪ್ರೀಂ ತೀರ್ಪು ನಿರ್ಣಾಯಕ!


ಸ್ಯಾಂಡಲ್‌ವುಡ್‌ನ ಖ್ಯಾತ ನಟ ದರ್ಶನ್ ಪಾಲಿಗೆ ಇಂದು ಬಹುಮುಖ್ಯ ದಿನ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್, ಈಗ ಥೈಲ್ಯಾಂಡ್‌ನಲ್ಲಿ 'ಡೆವಿಲ್' ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ನಡುವೆ, ಸುಪ್ರೀಂ ಕೋರ್ಟ್‌ನಲ್ಲಿ ಅವರ ಜಾಮೀನು ರದ್ದತಿ ಅರ್ಜಿ ವಿಚಾರಣೆಯ ತೀರ್ಪು ಹೊರಬೀಳಲಿದೆ.
ಈ ಹಿಂದೆ ಹೈಕೋರ್ಟ್ ನೀಡಿದ ಜಾಮೀನಿಗೆ ಪೊಲೀಸರು ವಿರೋಧ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತು ಇಂದು ತೀರ್ಪು ನಿರೀಕ್ಷಿಸಲಾಗಿದೆ. ತೀರ್ಪು ದರ್ಶನ್ ಪರವಾಗಿದ್ರೆ ಅವರು ಶೂಟಿಂಗ್ ಮುಂದುವರಿಸಬಹುದು, ಆದರೆ ಜಾಮೀನು ರದ್ದಾದರೆ, ದರ್ಶನ್ ಸೇರಿದಂತೆ A1 ಪವಿತ್ರ, A2 ದರ್ಶನ್ ಸೇರಿದಂತೆ 7 ಮಂದಿಗೆ ಮತ್ತೆ ಜೈಲುಮುಖವಾಗುವ ಅಪಾಯವಿದೆ.
ಇದೀಗ 'ಡೆವಿಲ್' ಸಿನಿಮಾ ಸೆಪ್ಟೆಂಬರ್ 25ರಂದು ಬಿಡುಗಡೆಯಾಗಬೇಕೆಂಬ ನಿರೀಕ್ಷೆಯಿದೆ. ಇತ್ತ ತೀರ್ಪು ವಿರೋಧಿಯಾಗಿದ್ರೆ, ಚಿತ್ರದ ಬಿಡುಗಡೆಗೂ ಅಡೆತಡೆಯಾಗುವ ಸಂಭವ ಇದೆ. ನಿಜಕ್ಕೂ, ಇದು ಚಾಲೆಂಜಿಂಗ್ ಸ್ಟಾರ್‌ಗಾಗಿ ರಿಯಲ್ ಚಾಲೆಂಜಿಂಗ್ ದಿನವಾಗಲಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
