ಕಾರು ರೇಸ್‌ಗೆ ಕಿಚ್ಚ ಎಂಟ್ರಿ: ‘ಕಿಚ್ಚಾಸ್ ಕಿಂಗ್ಸ್’ ಹೆಸರಿನಲ್ಲಿ ಬೆಂಗಳೂರು ತಂಡ ಖರೀದಿ!


ಚಲನಚಿತ್ರರಂಗದಲ್ಲಿ ಹೆಸರು ಮಾಡಿದ ನಟ ಕಿಚ್ಚ ಸುದೀಪ್ ಕಾರ್ ರೇಸಿಂಗ್ ಜಗತ್ತಿನಲ್ಲಿ ತನ್ನ ಹೆಜ್ಜೆ ಇಟ್ಟಿದ್ದಾರೆ. ಇಂಡಿಯನ್ ಕಾರ್ ರೇಸ್ ಫೆಸ್ಟಿವಲ್‌ಗಾಗಿ ನಡೆದ ಬಿಡ್ ಪ್ರಕ್ರಿಯೆಯಲ್ಲಿ ಸುದೀಪ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿದ್ದು, ತಮ್ಮ ತಂಡಕ್ಕೆ ‘ಕಿಚ್ಚಾಸ್ ಕಿಂಗ್ಸ್’ ಎಂಬ ಹೆಸರು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, "ಚಿತ್ರರಂಗದ ಆಟ ಹಾಗೂ ಕಾರ್ ರೇಸ್ ನಡುವೆ ಹೋಲಿಕೆ ಸಾಧ್ಯವಿಲ್ಲ. ರೇಸಿಂಗ್ ಸುಲಭದ್ದಲ್ಲ," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಂಡದ ಓನರ್ ಆಗಿದ್ದರೂ, ಕಾರ್ ನೊಳಗೆ ಕೂರಲು ಲೈಸೆನ್ಸ್ ಇರಬೇಕು ಎಂಬ ನಿಯಮ ಇರುವುದರಿಂದ, ಅವರ ಆಸೆ ಇನ್ನೂ ಪೂರಣವಾಗಿಲ್ಲ ಎಂದರು.
ಆಗಸ್ಟ್‌ನಲ್ಲಿ ಆರಂಭವಾಗಲಿರುವ ಈ ರೇಸಿಂಗ್ ಟೂರ್ನಿಯಲ್ಲಿ ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ ಹಾಗೂ ಗೋವಾ ಫ್ರಾಂಚೈಸಿಗಳು ಸ್ಪರ್ಧಿಸಲಿವೆ. "ನನ್ನ ಮೊದಲ ಕಾರು ಮಾರುತಿ 800. ಅದೇ ನನ್ನ ಸೂಪರ್ ಕಾರ್," ಎಂದು ತಮ್ಮ ನೆನಪು ಹಂಚಿಕೊಂಡ ಸುದೀಪ್, ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
