Back to Top

ನಟ ಸಂತೋಷ್ ಬಾಲರಾಜ್ ಆರೋಗ್ಯ ಸ್ಥಿತಿ ಗಂಭೀರ, ಐಸಿಯುನಲ್ಲಿ ಚಿಕಿತ್ಸೆ, ನಟನಿಗೆ ಏನಾಯಿತು?

SSTV Profile Logo SStv August 2, 2025
ಐಸಿಯುನಲ್ಲಿ ಸಂತೋಷ್ ಬಾಲರಾಜ್‌ಗೆ ಚಿಕಿತ್ಸೆ
ಐಸಿಯುನಲ್ಲಿ ಸಂತೋಷ್ ಬಾಲರಾಜ್‌ಗೆ ಚಿಕಿತ್ಸೆ

ಹಿರಿಯ ನಿರ್ಮಾಪಕ ಆನೆಕಲ್ ಬಾಲರಾಜ್ ಪುತ್ರ, ಕನ್ನಡದ ಯುವ ನಟ ಸಂತೋಷ್ ಬಾಲರಾಜ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿರಿಯ ವಯಸ್ಸಲ್ಲೇ ಜಾಂಡೀಸ್‌ನಿಂದ ಬಳಲುತ್ತಿರುವ 34 ವರ್ಷದ ಸಂತೋಷ್‌ ಅವರು ಬೆಂಗಳೂರು ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

'ಕರಿಯಾ-2', 'ಕೆಂಪ', 'ಗಣಪ', 'ಬರ್ಕ್ಲಿ', 'ಸತ್ಯ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಸಂತೋಷ್‌ ಅವರ ಆರೋಗ್ಯ ಹಿನ್ನಡೆಯಿಂದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

ಸಂತೋಷ್‌ ಅವರ ತಂದೆ ಆನೆಕಲ್ ಬಾಲರಾಜ್, 'ಕರಿಯಾ' ಸಿನಿಮಾ ಮೂಲಕ ನಟ ದರ್ಶನ್‌ ಅವರನ್ನು ಬಲವಾಗಿ ಪರಿಚಯಿಸಿದ ನಿರ್ಮಾಪಕರಾಗಿದ್ದು, ಅವರು ನಿರ್ಮಿಸಿದ 'ಕೆಂಪ' ಸಿನಿಮಾದ ಮೂಲಕ ಸಂತೋಷ್‌ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಈಗ ಸಂತೋಷ್ ಅವರ ಆರೋಗ್ಯ ಪುನಃ ಸ್ಥಿರವಾಗಲೆಂದು ಕನ್ನಡ ಚಿತ್ರರಂಗದ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.