Back to Top

ಇಬ್ಬರು ಮಕ್ಕಳ ದತ್ತು ಪಡೆದಿದ್ದಾರೆ ಶ್ರೀಲೀಲಾ ಸಿನಿಮಾಗಳು ಮಾತ್ರವಲ್ಲ, ಮಾನವೀಯತೆಯಲ್ಲೂ ಶ್ರೇಷ್ಟೆ

SSTV Profile Logo SStv December 5, 2024
ಇಬ್ಬರು ಮಕ್ಕಳ ದತ್ತು ಪಡೆದಿದ್ದಾರೆ ಶ್ರೀಲೀಲಾ
ಇಬ್ಬರು ಮಕ್ಕಳ ದತ್ತು ಪಡೆದಿದ್ದಾರೆ ಶ್ರೀಲೀಲಾ
ಇಬ್ಬರು ಮಕ್ಕಳ ದತ್ತು ಪಡೆದಿದ್ದಾರೆ ಶ್ರೀಲೀಲಾ ಸಿನಿಮಾಗಳು ಮಾತ್ರವಲ್ಲ, ಮಾನವೀಯತೆಯಲ್ಲೂ ಶ್ರೇಷ್ಟೆ ನಟಿ ಶ್ರೀಲೀಲಾ, ತಮ್ಮ ಅತ್ಯುತ್ತಮ ಅಭಿನಯ ಹಾಗೂ ನೃತ್ಯದ ಮೂಲಕ ಸಿನಿರಂಗದಲ್ಲಿ ಪ್ರಖ್ಯಾತಿ ಗಳಿಸಿದ್ದು, ಸಮಾಜಮುಖಿ ಕಾರ್ಯಗಳಲ್ಲೂ ಹೆಸರು ಮಾಡುತ್ತಿದ್ದಾರೆ. ಕೇವಲ 23ನೇ ವಯಸ್ಸಿನಲ್ಲಿ, ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆದು, ಅವರ ಭವಿಷ್ಯಕ್ಕೆ ಭದ್ರತೆ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಾತೃಶ್ರೀ ಮನೋವಿಕಾಸ ಕೇಂದ್ರದಲ್ಲಿ ಗುರು ಮತ್ತು ಶೋಭಿತಾ ಎಂಬ ಮಕ್ಕಳನ್ನು ದತ್ತು ಪಡೆದ ಶ್ರೀಲೀಲಾ, ಈ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅವರ ಜೀವನದಲ್ಲಿ ತಾಯಿಯ ಸ್ಥಾನವನ್ನು ತುಂಬಿ, ಮಕ್ಕಳಿಗೆ ಬೆಂಬಲದ ಕೈ ಜೋರಾಗಿದ್ದಾರೆ. ‘ಕಿಸ್’, ‘ಭರಾಟೆ’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ಶ್ರೀಲೀಲಾ, ಈಗ ‘ಪುಷ್ಪ 2’ನ ವಿಶೇಷ ಹಾಡಿನ ಮೂಲಕ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ವೈದ್ಯೆ ಆಗಬೇಕೆಂಬ ಆಸೆ ಹೊಂದಿದ್ದ ಶ್ರೀಲೀಲಾ, ತಮ್ಮ ಎಂಬಿಬಿಎಸ್ ಪೂರೈಸಿದ್ದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸೇವೆಗೂ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.