Back to Top

'ಹರಿಹರ ವೀರ ಮಲ್ಲು' ಬಾಕ್ಸಾಫೀಸ್ ದಾಳಿಗೆ ಪವನ್ ಕಲ್ಯಾಣ್ ಅಬ್ಬರ – ಪವನ್ ಕಲ್ಯಾಣ್ ಅಭಿಮಾನಿಗಳ ದಂಡು ಪ್ರಭಾವ!

SSTV Profile Logo SStv July 25, 2025
ಹೊಸ ದಾಖಲೆ ಬರೆಯುವ ಹರಿಹರ ವೀರ ಮಲ್ಲು
ಹೊಸ ದಾಖಲೆ ಬರೆಯುವ ಹರಿಹರ ವೀರ ಮಲ್ಲು

ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರ ಮಲ್ಲು' ಚಿತ್ರ ಜುಲೈ 25ರಂದು ಭರ್ಜರಿ ಓಪನಿಂಗ್ ನೀಡಿ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದೆ. ಭಾರತದಲ್ಲಿ ಮೊದಲ ದಿನದಂದು ಈ ಚಿತ್ರ ₹31.50 ಕೋಟಿ ಗಳಿಸಿದೆ ಎಂದು 'ಸ್ಯಾಕ್ನಿಲ್' ವರದಿ ಮಾಡಿದೆ. ಪ್ರದರ್ಶನದ ಹಿಂದಿನ ದಿನ ಪ್ರೀಮಿಯರ್ ಶೋಗಳಿಂದಲೇ ₹12.7 ಕೋಟಿ ಸಂಗ್ರಹವಾಗಿದೆ. ಈ ಮೂಲಕ ಮೊದಲ ದಿನದ ಒಟ್ಟು ಗಳಿಕೆ ₹44.20 ಕೋಟಿ ತಲುಪಿದೆ.

ಹೈದ್ರಾಬಾದ್‌ನಲ್ಲಿ ಶೇಕಡಾ 66.75%, ಬೆಂಗಳೂರಿನಲ್ಲಿ 37.75%, ಚೆನ್ನೈನಲ್ಲಿ 34% ಮತ್ತು ಮುಂಬೈನಲ್ಲಿ 29.25% ಆಕ್ಯುಪೆನ್ಸಿ ಕಂಡುಬಂದಿದೆ. ಪವನ್ ಕಲ್ಯಾಣ್ ಅವರ ಇತಿಹಾಸದಲ್ಲಿ ಈ ಚಿತ್ರ ದಿ ಬೆಸ್ಟ್ ಓಪನರ್ ಆಗಿದೆ. 'ಭೀಮ್ಲಾ ನಾಯಕ್', 'ವಕೀಲ್ ಸಾಬ್', 'ಬ್ರೋ' ಮೊದಲ ದಿನದ ಗಳಿಕೆಯನ್ನು ಈ ಚಿತ್ರ ಹಿಂದಿಕ್ಕಿದೆ.

ಪವನ್ ಕಲ್ಯಾಣ್ ಅಭಿಮಾನಿಗಳಿಗೆ ವಿಶೇಷವಾಗಿ ತಯಾರಿಸಿದ ಚಿತ್ರವೆಂಬ ಮಾತು ಕೇಳಿ ಬರುತ್ತಿದ್ದು, ವಾರಾಂತ್ಯದ ಹೊತ್ತಿಗೆ ಇನ್ನಷ್ಟು ಯಶಸ್ಸು ಕಾಣುವ ನಿರೀಕ್ಷೆ ಇದೆ.