Back to Top

ಹೊರದೇಶದಲ್ಲೂ ‘ಯುಐ’ ಹವಾ ಉಪ್ಪಿ ಸಿನಿಮಾ ಟಿಕೆಟ್ ಸೋಲ್ಡ್ ಔಟ್

SSTV Profile Logo SStv December 13, 2024
ಹೊರದೇಶದಲ್ಲೂ ‘ಯುಐ’ ಹವಾ
ಹೊರದೇಶದಲ್ಲೂ ‘ಯುಐ’ ಹವಾ
ಹೊರದೇಶದಲ್ಲೂ ‘ಯುಐ’ ಹವಾ ಉಪ್ಪಿ ಸಿನಿಮಾ ಟಿಕೆಟ್ ಸೋಲ್ಡ್ ಔಟ್ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ‘ಯುಐ’ ಸಿನಿಮಾ ಡಿ.20ರಂದು ವರ್ಲ್ಡ್‌ವೈಡ್ ರಿಲೀಸ್‌ಗೋಸ್ಕರ ಸಜ್ಜಾಗಿದೆ. ಈಗಾಗಲೇ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಚಿತ್ರದ ಟಿಕೆಟ್‌ಗಳು ಮುಂಗಡವಾಗಿ ಬುಕ್ ಆಗಿ ಹೌಸ್‌ಫುಲ್ ಆಗಿವೆ. ಟ್ರೈಲರ್‌ನಲ್ಲಿ ಉಪೇಂದ್ರ ಅವರ ಖಡಕ್ ಲುಕ್ ಮತ್ತು ಪ್ರಬುದ್ಧ ಡೈಲಾಗ್‌ಗಳು ಚಿತ್ರಪ್ರೇಮಿಗಳನ್ನು ಆಕರ್ಷಿಸಿದ್ದು, ಸಿನಿಮಾದ ಕುರಿತ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಮಾಜದ ಬುದ್ದಿವಂತಿಕೆಗೆ ಸವಾಲು ಹಾಕುವಂತಿರುವ ಟ್ರೈಲರ್ ಜನಮನ ಗೆದ್ದಿದ್ದು, 2040ನೇ ಭವಿಷ್ಯದ ಅನೂಹ್ಯ ಕಥಾವಸ್ತು ಪ್ರೇಕ್ಷಕರನ್ನು ಕೌತುಕಕ್ಕೆ ಗುರಿಮಾಡುತ್ತಿದೆ. ನಿನ್ನೆ ಬಾಲಿವುಡ್ ನಟ ಆಮೀರ್ ಖಾನ್ ಕೂಡಾ ‘ಯುಐ’ಗಾಗಿ ಉಪೇಂದ್ರಗೆ ಬೆಂಬಲ ಸೂಚಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಉಪ್ಪಿ ಸರ್ ಅಭಿಮಾನಿ ನಾನು!" ಎಂದು ಅವರ ಹರ್ಷ ವ್ಯಕ್ತವಾಯಿತು. ಈ ಸಿನಿಮಾದಲ್ಲಿ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಉಪೇಂದ್ರಗೆ ಜೋಡಿಯಾಗಿದ್ದು, ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‌ಟೈನರ್ಸ್‌ ಅಡಿಯಲ್ಲಿ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿ ನಿರ್ಮಾಣ ಮಾಡಿದ್ದಾರೆ. ಉಪ್ಪಿಯ ‘ಯುಐ’ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಡಿ.20ರಂದು ಬೃಹತ್ ಪ್ರಮಾಣದಲ್ಲಿ ತೆರೆಗೆ ಬರಲಿದ್ದು, ಅದನ್ನು ನೋಡಲು ಪ್ರತಿಕ್ಷಣಕ್ಕೂ ಫ್ಯಾನ್ಸ್ ಕಾತರರಾಗಿದ್ದಾರೆ.