ಅಪ್ಪು-ಶಿವಣ್ಣ-ಸುದೀಪ್ ಬಗ್ಗೆ ಕೆಟ್ಟದಾಗಿ ಪೋಸ್ಟ್? ನಟ ಎಸ್. ನಾರಾಯಣ್ ಹೆಸರಲ್ಲಿ ಫೇಕ್ ಅಕೌಂಟ್ ಹಂಗಾಮ!


ಹಿರಿಯ ನಟ ಹಾಗೂ ನಿರ್ದೇಶಕ ಎಸ್. ನಾರಾಯಣ್ ತಮ್ಮ ಹೆಸರಿನಲ್ಲಿ ಸೃಷ್ಟಿಸಲಾದ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಅಕೌಂಟ್‌ನಿಂದ ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್, ಯುವರಾಜ್ ಕುಮಾರ್ ಹಾಗೂ ಸುದೀಪ್ ಸೇರಿದಂತೆ ಹಲವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳು ಹಾಕಲಾಗಿದೆ ಎಂದು ನಾರಾಯಣ್ ಆರೋಪಿಸಿದ್ದಾರೆ.
“ಈ ಅಕೌಂಟ್ ನನ್ನದು ಅಲ್ಲ. ಸುಮಾರು ಐದಾರು ತಿಂಗಳಿಂದ ಇದನ್ನು ನಡೆಸುತ್ತಿದ್ದಾರೆ. ನನಗೆ ಇದಾರ ಬಗ್ಗೆ ಇತ್ತೀಚೆಗೆ ತಿಳಿಯಿತು. ಸ್ನೇಹಿತರ ಸೂಚನೆಯ ನಂತರ ಪೊಲೀಸರಿಗೆ ದೂರು ನೀಡಿದ್ದೇನೆ” ಎಂದು ನಾರಾಯಣ್ ತಿಳಿಸಿದ್ದಾರೆ.
ಅವರ ಹೆಸರಿನಲ್ಲಿ ಆಗುತ್ತಿರುವ ಇಂತಹ ಕ್ರಿಯೆಗಳು ಸಮಾಜದ ಶಾಂತಿ ಮತ್ತು ಕನ್ನಡಿಗರ ಗೌರವಕ್ಕೆ ಧಕ್ಕೆ ತಂದಿವೆ ಎಂದು ಕಳವಳ ವ್ಯಕ್ತಪಡಿಸಿರುವ ನಾರಾಯಣ್, ಇಂತಹ ದುಷ್ಕೃತ್ಯಗಳು ಚಿತ್ರರಂಗದ ಗೌರವವನ್ನು ಹಾನಿಗೊಳಿಸುತ್ತವೆ ಎಂದಿದ್ದಾರೆ. “ಅಭಿಮಾನಿಗಳ ನಡುವೆ ಆರೋಗ್ಯಕರ ಚರ್ಚೆ ಇರಬಹುದು, ಆದರೆ ಇಂತಹ ನಕಲಿ ಮಾಹಿತಿಯ ಆಧಾರದಲ್ಲಿ ಬ್ಲೇಮ್ ಗೇಮ್‌ಗಳು ನಡೆಯೋದು ವಿಷಾದನೀಯ” ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಾರಾಯಣ್, ಯಾವುದೇ ಕಲಾವಿದರ ಅಭಿಮಾನಿಗಳು ತನ್ನನ್ನು ಟಾರ್ಗೆಟ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ರೀತಿಯ ಫೇಕ್ ಅಕೌಂಟ್‌ಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
