ಬಿಗ್ ಬಾಸ್ 11 ಕೊಟ್ಟ ಮಾತು ಪೂರೈಸಿ ಹನುಮಂತನಿಗೆ ಗಿಫ್ಟ್ ಕಳುಹಿಸಿದ ಕಿಚ್ಚ ‘ಬಿಗ್ ಬಾಸ್ ಕನ್ನಡ 11’ ರಲ್ಲಿ ತನ್ನ ಸರಳತೆ ಮತ್ತು ಮುಗ್ಧತೆಯಿಂದ ಪ್ರೇಕ್ಷಕರ ಹಾಗೂ ಸದಸ್ಯರ ಮನಸ್ಸು ಗೆದ್ದಿರುವ ಹನುಮಂತಗೆ ಕಿಚ್ಚ ಸುದೀಪ್ ವಿಶೇಷ ಗಿಫ್ಟ್ ಕಳುಹಿಸಿದ್ದು, ಇದು ಎಲ್ಲರ ಗಮನ ಸೆಳೆದಿದೆ.ಕಳೆದ ವಾರಾಂತ್ಯದ ಕಿಚ್ಚನ ಪ್ರಶ್ನೆಗೆ, ಬಟ್ಟೆಗಳ ಕೊರತೆ ಇದೆ ಎಂದು ಉತ್ತರಿಸಿದ್ದ ಹನುಮಂತನಿಗೆ, ಸುದೀಪ್ ಹೊಸ ಬ್ರಾಂಡೆಡ್ ಬಟ್ಟೆ, ಲುಂಗಿ ಮತ್ತು ವಿಶೇಷ ಚಡ್ಡಿ ಕಳುಹಿಸಿದ್ದಾರೆ. ಈ ಗಿಫ್ಟ್‌ನ್ನು ನೋಡಿ ಹನುಮಂತ ಭಾವುಕರಾಗಿ, "ನಂಬೋಕೆ ಆಗುತ್ತಿಲ್ಲ, ಧನ್ಯವಾದಗಳು ಸರ್," ಎಂದರು.3 ಸಾವಿರದ ಚಡ್ಡಿ ನೋಡಿದ ಹನುಮಂತ, "ಮಾವೋ, 3 ಸಾವಿರದ ಚಡ್ಡಿ!" ಎಂದು ಹಾಸ್ಯಮಾಡಿ ಎಲ್ಲರಿಗೂ ನಗೆ ಬೀರಿಸಿದರು.ಸುದೀಪ್ ತಮ್ಮ ಮಾತು ಪೂರೈಸಿದ ಈ ಘಟನೆಯನ್ನು ಬಿಗ್ ಬಾಸ್ ಮನೆಯಲ್ಲಿ ಮತ್ತು ಪ್ರೇಕ್ಷಕರ ನಡುವೆ ಶ್ಲಾಘಿಸಲಾಗಿದೆ. ಹನುಮಂತನ ಸಂತೋಷ, ಕಿಚ್ಚನ ಮಾನವೀಯತೆ, ಈ ಘಟನೆ ಬಿಗ್ ಬಾಸ್ ಮನೆಯಲ್ಲಿ ನೆನಪಿಗಾಗಿ ಉಳಿಯಲಿದೆ.