Back to Top

ಗಣೇಶ್-ರಮೇಶ್ ಅರವಿಂದ್ ಜೋಡಿ ಮತ್ತೆ ಕಮಾಲ್ ಗಣೇಶ್ ಜೊತೆ ಸೇರಿ 'ಮುಂಗಾರು ಮಳೆ'ಯಲ್ಲಿ ಕಳೆದ ಹೋಗಿದ್ದೇನನ್ನೋ

SSTV Profile Logo SStv December 5, 2024
ಗಣೇಶ್-ರಮೇಶ್ ಅರವಿಂದ್ ಜೋಡಿ ಮತ್ತೆ ಕಮಾಲ್
ಗಣೇಶ್-ರಮೇಶ್ ಅರವಿಂದ್ ಜೋಡಿ ಮತ್ತೆ ಕಮಾಲ್
ಗಣೇಶ್-ರಮೇಶ್ ಅರವಿಂದ್ ಜೋಡಿ ಮತ್ತೆ ಕಮಾಲ್ ಗಣೇಶ್ ಜೊತೆ ಸೇರಿ 'ಮುಂಗಾರು ಮಳೆ'ಯಲ್ಲಿ ಕಳೆದ ಹೋಗಿದ್ದೇನನ್ನೋ ‘ಮುಂಗಾರು ಮಳೆ’ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿಜವಾದ ಕ್ರಾಂತಿ ಮೂಡಿಸಿದ ಗಣೇಶ್ ಮತ್ತು ರಮೇಶ್ ಅರವಿಂದ್ ಮತ್ತೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರದ ಮೇಕಿಂಗ್ ವಿಡಿಯೋ ಒಂದನ್ನು ರಮೇಶ್ ಅರವಿಂದ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗಿದೆ. ವಿಡಿಯೋದಲ್ಲಿ ಇಬ್ಬರೂ ಮ್ಯಾನ್‌ಹೋಲ್ ಬಳಿ ಏನನ್ನೋ ಹುಡುಕುತ್ತಿರು ದೃಶ್ಯವಿದ್ದು, ಪ್ರೇಕ್ಷಕರು ಇದನ್ನು ‘ಮುಂಗಾರು ಮಳೆ’ನಲ್ಲಿ ಕಳೆದು ಹೋದ ವಾಚ್ ಹುಡುಕುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. "ಇಬ್ಬರು ಪ್ರೇಮ ತ್ಯಾಗರು!", "ಮಹನೀಯರೇ, ಏನು ಹುಡುಕ್ತಿದ್ದೀರಿ?" ಎಂಬ ಅಭಿಮಾನಿಗಳ ಕಾಮೆಂಟ್ಸ್​ ಹಾಸ್ಯ ಹುಟ್ಟಿಸಿದೆ. ಈ ಚಿತ್ರವು ವಿಖ್ಯಾತ್ ಅವರ ನಿರ್ದೇಶನದ ಮೊದಲ ಸಿನಿಮಾ. ಸಿನಿಮಾ ಶೂಟಿಂಗ್‌ನಲ್ಲಿ ಅಭಿನಯಿಸಿದ ದೃಶ್ಯವು ಈಗ ಪ್ರೇಕ್ಷಕರಲ್ಲಿ ಹೊಸ ಕುತೂಹಲ ಹೆಚ್ಚಿಸಿದೆ. ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.