Back to Top

ಫಾರಂ ಹೌಸ್‌ನಲ್ಲಿ ಚಾಮುಂಡಿ ತಾಯಿ ಪೂಜೆ ನೆರವೇರಿಸಿದ ದರ್ಶನ್ – ಕುಟುಂಬದೊಂದಿಗೆ ವಿಶೇಷ ಆಚರಣೆ!

SSTV Profile Logo SStv July 5, 2025
ಫಾರಂ ಹೌಸ್‌ನಲ್ಲಿ ಚಾಮುಂಡಿ ತಾಯಿ ಪೂಜೆ ನೆರವೇರಿಸಿದ ದರ್ಶನ್
ಫಾರಂ ಹೌಸ್‌ನಲ್ಲಿ ಚಾಮುಂಡಿ ತಾಯಿ ಪೂಜೆ ನೆರವೇರಿಸಿದ ದರ್ಶನ್

ನಟ ದರ್ಶನ್ ಅವರು ಮೈಸೂರಿನ ತಮ್ಮ ನಿವಾಸ ಹಾಗೂ ಫಾರಂ ಹೌಸ್‌ನಲ್ಲಿ ಎರಡನೇ ಆಷಾಡ ಶುಕ್ರವಾರದ ಪ್ರಯುಕ್ತ ಚಾಮುಂಡಿ ತಾಯಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಪ್ರತಿವರ್ಷದಂತೆ ಈ ಬಾರಿ ಕೂಡ ಕುಟುಂಬಸ್ಥರ ಜೊತೆಗೂಡಿ ಭಕ್ತಿಯಿಂದ ಹಬ್ಬ ಆಚರಿಸಿರುವ ದರ್ಶನ್, ತಾಯಿ ಮೀನಾ, ಪತ್ನಿ ಹಾಗೂ ಸಹೋದರರ ಜೊತೆ ಮೈಸೂರಿನ ಸಿದ್ಧಾರ್ಥ ಲೇಔಟ್ ನಿವಾಸದಲ್ಲಿ ಪೂಜೆ ನಡೆಸಿದರು.

ಹೆಣ್ಮಕ್ಕಳ ಹಬ್ಬವಾಗಿರುವ ಚಾಮುಂಡಿ ಪೂಜೆಗೆ ವಿಶೇಷ ಮಹತ್ವವಿದ್ದು, ದರ್ಶನ್ ಪ್ರತಿವರ್ಷ ಸ್ನೇಹಿತರೊಂದಿಗೆ ಫಾರಂ ಹೌಸ್‌ನಲ್ಲಿ ಈ ಹಬ್ಬ ಆಚರಿಸುತ್ತಿದ್ದರು. ಈ ಬಾರಿ ಕುಟುಂಬದವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನಿನಲ್ಲಿರುವ ದರ್ಶನ್, ಇತ್ತೀಚೆಗೆ 'ಡೆವಿಲ್' ಸಿನಿಮಾದ ಶೂಟಿಂಗ್‌ಗಾಗಿ ಜೂನ್ 1ರಿಂದ 25ರ ವರೆಗೆ ವಿದೇಶ ಪ್ರವಾಸಕ್ಕೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಅನುಮತಿ ಪಡೆದಿದ್ದರು.