Back to Top

"ಈ ಪಾತ್ರ ಮಾತ್ರ ನಾನು ಎಂದಿಗೂ ಮಾಡಲ್ಲ" – ರಶ್ಮಿಕಾ ಮಂದಣ್ಣ ಸ್ಪಷ್ಟನೆ

SSTV Profile Logo SStv July 1, 2025
ಈ ಕ್ಯಾರೆಕ್ಟರ್ ಮಾತ್ರ ಎಂದಿಗೂ ಮಾಡಲ್ವಂತೆ ರಶ್ಮಿಕಾ!
ಈ ಕ್ಯಾರೆಕ್ಟರ್ ಮಾತ್ರ ಎಂದಿಗೂ ಮಾಡಲ್ವಂತೆ ರಶ್ಮಿಕಾ!

'ನ್ಯಾಷನಲ್ ಕ್ರಶ್' ಎಂದು ಕರೆಯಲ್ಪಡುವ ರಶ್ಮಿಕಾ ಮಂದಣ್ಣ, ತಮ್ಮ ಪ್ರಾಮಾಣಿಕ ಅಭಿಪ್ರಾಯ ಮತ್ತು ವ್ಯಕ್ತಿತ್ವದ ದೃಢ ನಿಲುವಿನಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ಲಂಡನ್‌ನಲ್ಲಿ ನಡೆದ ‘ವೀ ದಿ ವುಮೆನ್’ ಉತ್ಸವದಲ್ಲಿ ಖ್ಯಾತ ಪತ್ರಕರ್ತೆ ಬರ್ಖಾ ದತ್ ಅವರೊಂದಿಗೆ ಮಾತನಾಡಿದ ವೇಳೆ, ರಶ್ಮಿಕಾ ತಮ್ಮ ವೃತ್ತಿ ಜೀವನದ ಹಲವು ಅಂಶಗಳನ್ನು ಬಹಿರಂಗಪಡಿಸಿದರು.

ಅದರಲ್ಲಿಯೂ ಒಂದು ಸ್ಪಷ್ಟ ನಿಲುವು ಎಂದರೆ – ಧೂಮಪಾನ (Smoking) ಪಾತ್ರ. “ನನಗೆ ಧೂಮಪಾನ ಇಷ್ಟವಿಲ್ಲ. ನನಗೆ ಅದು ನೋಡಲು ಸಹ ಇಷ್ಟವಿಲ್ಲ. ನಾನು ನಿಜ ಜೀವನದಲ್ಲಿಯೂ ಧೂಮಪಾನ ಮಾಡುವುದಿಲ್ಲ, ಸಿನಿಮಾ ಪರದೆಯ ಮೇಲೆಯೂ ಸಹ ಅಲ್ಲ. ಆ ಪಾತ್ರಕ್ಕಾಗಿ ಒತ್ತಾಯ ಮಾಡಿದರೆ ನಾನು ಚಿತ್ರವನ್ನೇ ರಿಜೆಕ್ಟ್ ಮಾಡ್ತೀನಿ,” ಎಂದು ರಶ್ಮಿಕಾ ಖಡಕ್ ಹೇಳಿಕೆ ನೀಡಿದರು.

‘ಅನಿಮಲ್’ ಚಿತ್ರದಲ್ಲಿ ತಮ್ಮ ಪಾತ್ರ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ಅವರು ತಮ್ಮ ನಟನೆಗೆ ಗಡಿಯನ್ನು ಎಳೆಯುವುದು ಹೇಗೆ ಎಂಬುದರ ಬಗ್ಗೆ ಮಾತನಾಡಿದರು: “ಚಿತ್ರವನ್ನು ನಾನು ಕಲಾಕೃತಿಯಾಗಿ ನೋಡುತ್ತೇನೆ. ಪ್ರೇಕ್ಷಕರು ಸಿನೆಮಾ ನಿಜವಾಗಿ ಮಾಡುತ್ತಾರೆ ಎಂಬ ನಂಬಿಕೆಯಿಂದ ನಾನು ಪಾತ್ರದ ಆಯ್ಕೆ ಮಾಡಲ್ಲ,” ಎಂದು ತಿಳಿಸಿದರು. ರಶ್ಮಿಕಾ ಪ್ರಸ್ತುತ ‘ದಿ ಗರ್ಲ್‌ಫ್ರೆಂಡ್’, ‘ತಮ್ಮಾ’, ‘ರೇನ್‌ಬೋ’, ‘ಮೈಸಾ’, ‘ಪುಷ್ಪ 3’ ಮುಂತಾದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಧನುಷ್ ಜೊತೆ ನಟಿಸಿರುವ 'ಕುಬೇರ' 100 ಕೋಟಿ ಕ್ಲಬ್ ಸೇರಿರುವಾಗ, 'ಸಿಕಂದರ್' ಮಾತ್ರ ನಿರೀಕ್ಷಿತ ಯಶಸ್ಸು ತರುವಲ್ಲಿ ವಿಫಲವಾಯಿತು.

ಇದಲ್ಲದೆ, ಬಾಲಿವುಡ್ ತಾರೆ ಆಯುಷ್ಮಾನ್ ಖುರಾನಾ ಜೊತೆ 'ತಮ್ಮಾ' ಚಿತ್ರದಲ್ಲಿ ಮತ್ತು ಟಾಲಿವುಡ್ ನಿರ್ದೇಶಕರ ಜೊತೆ ಪ್ರಾಜೆಕ್ಟ್‌ಗಳಲ್ಲಿ ಕೂಡ ತೊಡಗಿಕೊಂಡಿದ್ದಾರೆ. ಟಾಲಿವುಡ್ ನಿರ್ಮಾಪಕರು ಅವರ ಡೇಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ, ಎನ್ನುವುದು ಇಂದಿನ ತಾಪಮಾನ.