Back to Top

ಬಿಗ್ ಬಾಸ್ 12: ಈ ಬಾರಿ ಕಂಟ್ರೋವರ್ಸಿ ಸ್ಟಾರ್‌ಗಳಿಗೆ ನೋ ಎಂಟ್ರಿ?

SSTV Profile Logo SStv June 30, 2025
ಈ ಬಾರಿ ಬಿಗ್‌ ಬಾಸ್‌ನಲ್ಲಿ ವಿವಾದಿತರಿಗೆ ನೋ ಎಂಟ್ರಿ?
ಈ ಬಾರಿ ಬಿಗ್‌ ಬಾಸ್‌ನಲ್ಲಿ ವಿವಾದಿತರಿಗೆ ನೋ ಎಂಟ್ರಿ?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ಗಾಗಿ ಕೌಂಟ್‌ಡೌನ್ ಆರಂಭವಾಗಿದೆ. ಕಿಚ್ಚ ಸುದೀಪ್ ಅವರು ಈ ಬಾರಿಯೂ ನಿರೂಪಣೆ ನಿರ್ವಹಿಸಲಿದ್ದಾರೆ ಎಂಬ ಅಧಿಕೃತ ಘೋಷಣೆಯ ನಂತರ, ಅಭಿಮಾನಿಗಳು ಖುಷಿಯಿಂದ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಈ ಬಾರಿಯ ಸೀಸನ್ ಕುರಿತು ವಿಶೇಷ ಚರ್ಚೆ ಏನೆಂದರೆ ವಿವಾದಿತ ವ್ಯಕ್ತಿಗಳಿಗೆ ಎಂಟ್ರಿ ನೀಡಲಾಗುತ್ತದೆಯಾ ಇಲ್ಲವಾ? ಎಂಬ ಪ್ರಶ್ನೆ. ಈ ಕುರಿತು ಪ್ರತಿಕ್ರಿಯಿಸಿರುವ ಸುದೀಪ್, “ಯಾರನ್ನೂ ತಕ್ಷಣವೇ ಜಡ್ಜ್ ಮಾಡಲಾಗದು. ಆದರೆ ಕೆಲವು ಷರತ್ತುಗಳು ಇವೆ. ಅವುಗಳನ್ನು ಈಗಲೇ ಹೇಳಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಕಲರ್ಸ್ ಕನ್ನಡ ತಂಡದ ಮಾಹಿತಿ ಪ್ರಕಾರ, ಈ ಬಾರಿಯ ಕಂಟೆಸ್ಟೆಂಟ್‌ಗಳ ಆಯ್ಕೆ ಬುದ್ದಿಮತ್ತೆ ಆಧಾರಿತವಾಗಿದೆ. "ಒಬ್ಬರು ಬುದ್ದಿವಂತರು, ಮತ್ತೊಬ್ಬರು ಅತೀ ಬುದ್ಧಿವಂತರು" ಎಂಬ ವಿವರಣೆ ಇದೇ ಮೊದಲ ಬಾರಿಗೆ ಕುತೂಹಲ ಕೆರಳಿಸಿದೆ.

ಬಿಗ್ ಬಾಸ್ ಶೋ ಜೊತೆ ವರ್ಷಕ್ಕೆ ಎರಡು ಸಿನಿಮಾ ಮಾಡುವ ಮಟ್ಟದ ಡೆಡಿಕೇಶನ್ ಬಗ್ಗೆ ಕೂಡ ಶೋ ಆಯೋಜಕರು ಹರ್ಷ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಪರ್ಧಿ ಪಟ್ಟಿ ಇನ್ನೂ ಬಹಿರಂಗವಾಗಿಲ್ಲ, ಆದರೆ ಶೋ ಸ್ಟಾರ್ಟ್ ಆಗೋ ಕ್ಷಣ ಹೆಚ್ಚು ದೂರದಲ್ಲಿಲ್ಲ!