ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಯಶ್ ತಾಯಿ ಪುಷ್ಪಾ – ‘ಕೊತ್ತಲವಾಡಿ’ ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆ


ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ, ತಮ್ಮ ನಿರ್ಮಾಣ ಸಂಸ್ಥೆ ಪಿಎ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸುತ್ತಿರುವ ಮೊದಲ ಸಿನಿಮಾ 'ಕೊತ್ತಲವಾಡಿ' ಬಿಡುಗಡೆಗೆ ಸಜ್ಜಾಗಿದ್ದಾರೆ. ಈ ಹಿನ್ನೆಲೆ ಅವರು ನಾಡಿನ ನಾಡೋಜ ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
"ಇದು ನಮಗೆ ದೇವಸ್ಥಾನ. ಇದೇ ಮೊದಲ ಹೆಜ್ಜೆಗೆ ಅಣ್ಣಾವ್ರ ಆಶೀರ್ವಾದ ಬೇಕೆನಿಸಿತು" ಎಂದು ಅವರು ಭಾವೋದ್ವೇಗದಿಂದ ಮಾತನಾಡಿದರು. ಯಶ್ ತಾಯಿ ಪುಷ್ಪಾ ಡಾ.ರಾಜ್‌ಕುಮಾರ್ ಅವರ ಅಪಾರ ಅಭಿಮಾನಿ ಎಂಬುದು ಹೊಸದೇನಲ್ಲ. ತಮ್ಮ ನಿರ್ಮಾಣದ ಮೊದಲ ಪ್ರಯತ್ನಕ್ಕೂ ಅದೇ ಭಕ್ತಿಯ ನೋಟದಿಂದ ಶುಭಾರಂಭ ನೀಡಿದ್ದಾರೆ.
'ಕೊತ್ತಲವಾಡಿ' ಚಿತ್ರದಲ್ಲಿ ಪೃಥ್ವಿ ಅಂಬಾರ್ ಮತ್ತು ಕಾವ್ಯಾ ಶೈವ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಇದು ಒಂದು ನಾಟಕಾಧಾರಿತ ಥ್ರಿಲ್ಲರ್ ಎಂಟರ್‌ಟೈನರ್ ಆಗಿದೆ. ಶ್ರೀರಾಜ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ನಟ ರಾಜೇಶ್ ನಟರಂಗ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರ ಆಗಸ್ಟ್ 1ರಂದು ಬಿಡುಗಡೆಯಾಗಲಿದೆ. ಈ ಮೂಲಕ ಯಶ್ ಕುಟುಂಬದವರು ಚಿತ್ರರಂಗದಲ್ಲಿ ಮತ್ತೊಂದು ಹೊಸ ಅಧ್ಯಾಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
