Back to Top

ಡಾಲಿ ಧನಂಜಯನ ಮದುವೆಗೆ ಮೊದಲ ಆಮಂತ್ರಣ ಸಿಎಂ ಸಿದ್ದರಾಮಯ್ಯನವರಿಗೆ

SSTV Profile Logo SStv December 16, 2024
ಡಾಲಿ ಧನಂಜಯನ ಮದುವೆಗೆ ಮೊದಲ ಆಮಂತ್ರಣ ಸಿಎಂಗೆ
ಡಾಲಿ ಧನಂಜಯನ ಮದುವೆಗೆ ಮೊದಲ ಆಮಂತ್ರಣ ಸಿಎಂಗೆ
ಡಾಲಿ ಧನಂಜಯನ ಮದುವೆಗೆ ಮೊದಲ ಆಮಂತ್ರಣ ಸಿಎಂ ಸಿದ್ದರಾಮಯ್ಯನವರಿಗೆ ಬೆಂಗಳೂರು ಜನಪ್ರಿಯ ಚಿತ್ರನಟ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ವಿವಾಹ ಫೆಬ್ರವರಿ 15ರಂದು ಮೈಸೂರಿನಲ್ಲಿ ನಡೆಯಲಿದೆ. ಮದುವೆ ಗೆ ಮೊದಲ ಆಹ್ವಾನವನ್ನು ಭಾವಿ ಪತ್ನಿ ಧನ್ಯತಾರೊಂದಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಿದರು. ಡಾಲಿ ಹಾಗೂ ಧನ್ಯತಾ ಕಾವೇರಿ ನಿವಾಸಕ್ಕೆ ಭೇಟಿ ನೀಡಿ, ಸಿಎಂ ಅವರನ್ನು ಮದುವೆಗೆ ಆಹ್ವಾನಿಸಿದರು. ಆ ನಂತರ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೂ ಲಗ್ನಪತ್ರಿಕೆ ಹಸ್ತಾಂತರಿಸಿದರು. ಅನುಭವಾನ್ವಿತ ಥೀಮ್ ಡಾಲಿ-ಧನ್ಯತಾ ಅವರ ಆಮಂತ್ರಣ ಪತ್ರಿಕೆ ‘ಓಲ್ಡ್ ಇಸ್ ಗೋಲ್ಡ್’ ಥೀಮ್‌ನಲ್ಲಿ ವಿನ್ಯಾಸಗೊಂಡಿದ್ದು, ಅಂಚೆ ಪತ್ರ ಮಾದರಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಫೆ. 15ರಂದು ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಫೆ. 16ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅಭಿಮಾನಿಗಳು ಹಾಗೂ ಇತರೆ ಗಣ್ಯರು ಅವರಿಗೆ ಶುಭ ಹಾರೈಸುತ್ತಿದ್ದಾರೆ.