ಧ್ರುವ ಸರ್ಜಾ ‘ಕೆಡಿ’ ಟೀಸರ್ ಡೇಟ್ ಘೋಷಣೆ – ಪ್ರಚಾರದಲ್ಲಿ ಸೀಕ್ರೆಟ್ ಪ್ಲಾನ್!


ಧ್ರುವ ಸರ್ಜಾ ಅಭಿನಯದ ಮತ್ತು ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’ ಇದೀಗ ಟೀಸರ್ ಬಿಡುಗಡೆ ದಿನಾಂಕದ ಮೂಲಕ ಮತ್ತೆ ಸುದ್ದಿಗೆ ಬಂದಿದೆ. ಈಗಾಗಲೇ ರಿಲೀಸ್ ಆಗಿರುವ ಎರಡು ಹಾಡುಗಳು ವೈರಲ್ ಆದ ಬೆನ್ನಲ್ಲೇ, ಟೀಸರ್ ರಿಲೀಸ್ ಕೌಂಟ್‌ಡೌನ್ ಆರಂಭವಾಗಿದೆ.
ವಿಶೇಷವೆಂದರೆ, ಟೀಮ್ ಕೆಡಿ ಪ್ರಚಾರದ ಹೊಸ ತಂತ್ರದೊಂದಿಗೆ ಟೀಸರ್ ಬಿಡುಗಡೆಗೆ ಮುಂದಾಗಿದ್ದು, ಒಂದೇ ದಿನ ಎಲ್ಲಾ ಭಾಷೆಯಲ್ಲಿ ಬಿಡುಗಡೆ ಮಾಡುವ ಬದಲು, ಪ್ರತ್ಯೇಕ ದಿನಗಳಲ್ಲಿ ವಿಭಿನ್ನ ನಗರಗಳಲ್ಲಿ ಪ್ರಚಾರ ಮಾಡುವುದಾಗಿ ಪ್ಲಾನ್ ಮಾಡಿದ್ದಾರೆ.
ಜುಲೈ 11 ರಂದು ಮುಂಬೈನಲ್ಲಿ ಹಿಂದಿ ಟೀಸರ್, ಅದೇ ದಿನ ಹೈದ್ರಾಬಾದ್‌ನಲ್ಲಿ ತೆಲುಗು ಟೀಸರ್ ರಿಲೀಸ್ ಆಗಲಿದೆ. ಆದರೆ ಕನ್ನಡದ ಟೀಸರ್ ಬಗ್ಗೆ ಟೀಮ್ ಈಗಷ್ಟೇ ಒಂದು ಸೀಕ್ರೆಟ್ ಬಹಿರಂಗಪಡಿಸಿದ್ದು, ಕೊನೆಯದಾಗಿ ಬೆಂಗಳೂರಿನಲ್ಲಿ ಮೂಲ ಭಾಷೆ ಕನ್ನಡದಲ್ಲಿ ಟೀಸರ್ ರಿಲೀಸ್ ಮಾಡುವ ಪ್ಲಾನ್ ಇದೆಯಂತೆ.
ಬಹುಕೋಟಿ ವೆಚ್ಚದಲ್ಲಿ ನಿರ್ಮಿತವಾಗಿರುವ ಈ ಸಿನಿಮಾ, ಕೆವಿಎನ್ ಫಿಲಂಸ್ ವತಿಯಿಂದ ಪ್ರಸ್ತುತವಾಗಿದ್ದು, ಧ್ರುವ ಸರ್ಜಾ ಫ್ಯಾನ್ಸ್ ಗೆ ಭರ್ಜರಿ ಉತ್ಸಾಹ ಹುಟ್ಟಿಸಿದೆ. ಟೀಸರ್‌ಗಳ ಸೀಮಿತ ಬಿಡುಗಡೆ ತಂತ್ರದ ಮೂಲಕ ಪ್ರಚಾರಕ್ಕೂ ವಿಭಿನ್ನ ತಿರುವು ನೀಡಲಾಗಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
