Back to Top

'ಪ್ರಥಮ್ ಹುಚ್ಚ, ಪಬ್ಲಿಸಿಟಿಗಾಗಿ ಮಾಡ್ತಿದ್ದಾನೆ' – ದೇವಾಲಯ ಘಟನೆಯ ಬಗ್ಗೆ ಯಶಸ್ವಿನಿ ಭಯಾನಕ ಹೇಳಿಕೆ

SSTV Profile Logo SStv August 1, 2025
ದೇವಾಲಯ ಘಟನೆಯ ಬಗ್ಗೆ ಯಶಸ್ವಿನಿ ಭಯಾನಕ ಹೇಳಿಕೆ
ದೇವಾಲಯ ಘಟನೆಯ ಬಗ್ಗೆ ಯಶಸ್ವಿನಿ ಭಯಾನಕ ಹೇಳಿಕೆ

ದರ್ಶನ್ ಅಭಿಮಾನಿಗಳ ವಿರುದ್ಧ ಕಾಮೆಂಟ್ ನೀಡಿದ ನಟ ಪ್ರಥಮ್ ಇದೀಗ ಹೊಸ ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. ರೌಡಿ ಶೀಟರ್ ಬೇಕರಿ ರಘು ಹಾಗೂ ಯಶಸ್ವಿನಿ ಗೌಡ ವಿರುದ್ಧ ನೀಡಿದ ದೂರಿನ ಹಿನ್ನೆಲೆಯಲ್ಲಿ, ಸ್ಥಳ ಮಹಜರಿ ಮಾಡಲು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಈ ಮಧ್ಯೆ ಯಶಸ್ವಿನಿ ಗೌಡ ಪ್ರತಿಕ್ರಿಯಿಸಿ, "ಪ್ರಥಮ್ ಹುಚ್ಚ. ಪಬ್ಲಿಸಿಟಿಗಾಗಿ ಮಾಡ್ತಿದ್ದಾನೆ. ಅವನ ಮಾತುಗಳಲ್ಲಿ ನಂಬಿಕೆ ಇಲ್ಲ. ನಮ್ಮ ದೇವಾಲಯ ಭೇಟಿಯಲ್ಲಿ ಎಲ್ಲವೂ ನಾರ್ಮಲ್ ಆಗಿತ್ತು. ಅವನು ಬಂದದ್ದೂ, ಮಾತಾಡಿದದ್ದೂ ಸೌಮ್ಯವಾಗಿತ್ತು" ಎಂದರು.

ಇದಕ್ಕೂ ಮೊದಲು ಧ್ರುವ ಸರ್ಜಾ ಕೂಡ ಪ್ರಥಮ್ ವಿರುದ್ಧ ಮಾತನಾಡಿದ್ದರು. "ಮಾತಿನಲ್ಲಿ ಹಿಡಿತ ಇರಬೇಕು. ಪ್ರತಿಯೊಬ್ಬರಿಗೂ ತಮ್ಮ ಸ್ವಾಭಿಮಾನ ಇರುತ್ತೆ. ದರ್ಶನ್ ಅಭಿಮಾನಿಗಳ ವಿಚಾರದಲ್ಲಿ ನಾನು ದರ್ಶನ್ ಪರ ನಿಲ್ಲುತ್ತೇನೆ" ಎಂದು ಸ್ಪಷ್ಟಪಡಿಸಿದ್ದರು.

ಈ ಸಂಬಂಧ ಹೆಚ್ಚುವರಿ ವಿಚಾರಣೆಗಾಗಿ ಎಲ್ಲಾ ಪ್ರಮುಖರಿಗೂ ಪೊಲೀಸರು ನೋಟಿಸ್ ಜಾರಿಯಾಗಿದ್ದು, ಪ್ರಕರಣ ಇನ್ನಷ್ಟು ತೀವ್ರತೆಗೆ ಹೆಜ್ಜೆಯಿಟ್ಟಿದೆ.