ಡಿಸೆಂಬರ್ 27ಕ್ಕೆ ‘ಔಟ್ ಆಫ್ ಸಿಲಬಸ್’ ಸಿನಿಮಾ ಬಿಡುಗಡೆ ನಟ ಮತ್ತು ನಿರ್ದೇಶಕ ಪ್ರದೀಪ್ ದೊಡ್ಡಯ್ಯ ಅವರ ‘ಔಟ್ ಆಫ್ ಸಿಲಬಸ್’ ಸಿನಿಮಾ ಡಿಸೆಂಬರ್ 27ರಂದು ತೆರೆಕಾಣಲಿದೆ. ಕಾಲೇಜು ವಿದ್ಯಾರ್ಥಿಗಳ ಜೀವನವನ್ನು ಆಧರಿಸಿ ಹೆಣೆದಿರುವ ಈ ಕಥೆ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಲಿದ್ದು, ಟ್ರೇಲರ್ ಈಗಾಗಲೇ ಯುವಜನರಲ್ಲಿ ಹುಮ್ಮಸ್ಸು ಮೂಡಿಸಿದೆ.
ಈ ಚಿತ್ರವನ್ನು ಶ್ರೀಮತಿ ವಿಜಯಕಲಾ ಸುಧಾಕರ್ ಮತ್ತು ತನುಷ್ ಎಸ್.ವಿ. ದೇಸಾಯಿ ಗೌಡ ಸಹ-ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಪ್ರದೀಪ್ ದೊಡ್ಡಯ್ಯ ಜೊತೆಗೆ ಹೃತಿಕಾ ಶ್ರೀನಿವಾಸ್, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಮಂಜು ಪಾವಗಡ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೇವ ವಡ್ಡೆ ಛಾಯಾಗ್ರಹಣ ಮತ್ತು ಉಮೇಶ್ ಆರ್.ಬಿ. ಸಂಕಲನ ಚಿತ್ರಕ್ಕೆ ಬಲ ನೀಡಿವೆ.
ಕನ್ನಡ ಚಿತ್ರರಂಗಕ್ಕೆ ಹೊಸತಾದ ಕಥೆ ಮತ್ತು ನಿರೂಪಣೆಯೊಂದಿಗೆ ಡಿ.27ರಂದು ‘ಔಟ್ ಆಫ್ ಸಿಲಬಸ್’ ಪ್ರೇಕ್ಷಕರನ್ನು ಮನರಂಜಿಸಲು ಸಿದ್ಧವಾಗಿದೆ.