Back to Top

ಟೀಸರ್ ಅಲ್ಲ, ಟ್ರೈಲರ್ ಅಲ್ಲ ಡಿ.2ಕ್ಕೆ ಬರಲಿದೆ ‘ಯುಐ’ ವಾರ್ನರ್

SSTV Profile Logo SStv November 29, 2024
ಡಿ.2ಕ್ಕೆ ಬರಲಿದೆ ‘ಯುಐ’ ವಾರ್ನರ್
ಡಿ.2ಕ್ಕೆ ಬರಲಿದೆ ‘ಯುಐ’ ವಾರ್ನರ್
ಟೀಸರ್ ಅಲ್ಲ, ಟ್ರೈಲರ್ ಅಲ್ಲ ಡಿ.2ಕ್ಕೆ ಬರಲಿದೆ ‘ಯುಐ’ ವಾರ್ನರ್ ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಸಿನಿಮಾ ‘ಯುಐ’ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಭರಿತವಾಗಿದೆ. ಈ ಕುತೂಹಲಕ್ಕೆ ಮತ್ತಷ್ಟು ಬಿರುಸು ನೀಡುತ್ತಾ, ಡಿಸೆಂಬರ್ 2ರಂದು ಬೆಳಗ್ಗೆ 11:07ಕ್ಕೆ ‘ಯುಐ’ ವಾರ್ನರ್ ಬಿಡುಗಡೆ ಮಾಡಲು ಉಪ್ಪಿ ಸಜ್ಜಾಗಿದ್ದಾರೆ. ‘ಟೀಸರ್’ ಅಥವಾ ‘ಟ್ರೈಲರ್’ ಅನ್ನುವ ಪದಗಳನ್ನು ಬಿಟ್ಟು, ಉಪೇಂದ್ರ ‘ವಾರ್ನರ್’ ಎಂಬ ಹೊಸ ಶಬ್ದವನ್ನು ಪರಿಚಯಿಸಿದ್ದಾರೆ, ಇದು ಸಿನಿಮಾದ ಮೇಕಿಂಗ್‌ಗೂ ಹೊಸತನವನ್ನು ತಂದುಕೊಡಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಸ್ವತಃ ಉಪೇಂದ್ರ ಈ ಸಿನಿಮಾ ನಿರ್ದೇಶಿಸಿ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ‘ಯುಐ’ ಡಿಸೆಂಬರ್ 20ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಇದು ವಿಸ್ಮಯದ ಕಥಾಹಂದರವನ್ನು ಪ್ರೇಕ್ಷಕರ ಮುಂದಿಡಲಿದ್ದು, ಈಗಾಗಲೇ ಬಿಡುಗಡೆ ಆದ ಟೀಸರ್ ಹಾಗೂ ಸಾಂಗ್ ಬೀಟ್ಸ್‌ಗಳಿಂದ ಸಿನಿಮಾ ಬಗ್ಗೆ ಆಕರ್ಷಣೆ ಹೆಚ್ಚಾಗಿದೆ. ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದು, ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ಸಂಸ್ಥೆಗಳು ಅದ್ದೂರಿ ನಿರ್ಮಾಣ ಮಾಡಿದ್ದಾರೆ. ಡಿ.2ಕ್ಕೆ ಫ್ಯಾನ್ಸ್‌ಗಾಗಿ ನಿರೀಕ್ಷಿತ ‘ವಾರ್ನರ್’ ಘೋಷಣೆಗೆ ರೆಡಿ ಆಗಿದೆ.