Back to Top

ದರ್ಶನ್ ಮಧ್ಯಂತರ ಜಾಮೀನು ರದ್ದು ಕೋರಿ ಸುಪ್ರೀಂನಲ್ಲಿ ಅರ್ಜಿ ದರ್ಶನ್​ಗೆ ಮುಗಿಯದ ಸಂಕಷ್ಟ

SSTV Profile Logo SStv December 5, 2024
ದರ್ಶನ್​ಗೆ ಮುಗಿಯದ ಸಂಕಷ್ಟ
ದರ್ಶನ್​ಗೆ ಮುಗಿಯದ ಸಂಕಷ್ಟ
ದರ್ಶನ್ ಮಧ್ಯಂತರ ಜಾಮೀನು ರದ್ದು ಕೋರಿ ಸುಪ್ರೀಂನಲ್ಲಿ ಅರ್ಜಿ ದರ್ಶನ್​ಗೆ ಮುಗಿಯದ ಸಂಕಷ್ಟ ನಟ ದರ್ಶನ್​ಗೆ ಬೆನ್ನು ನೋವಿನ ಕಾರಣ ಹೇಳಿ ಹೈಕೋರ್ಟ್​​ ಮಧ್ಯಂತರ ಜಾಮೀನು ನೀಡಿದ್ದು, ಅದನ್ನು ರದ್ದು ಮಾಡಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​​ ಮೆಟ್ಟಿಲೇರಿದೆ. ದರ್ಶನ್​​ ಅವರು ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಇದ್ದರೆ ಪಾರ್ಶವಾಯು ಬರಬಹುದೆಂದು ವೈದ್ಯರು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಜಾಮೀನು ಪಡೆದಿದ್ದರು. ಪ್ರಸಕ್ತ ಸಮಯದಲ್ಲಿ ದರ್ಶನ್​​ ಫಿಸಿಯೋಥೆರಪಿಗೆ ಒಳಗಾಗಿದ್ದು, ಶೀಘ್ರ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಈ ಜಾಮೀನು ರದ್ದತಿ ಕೋರಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದೆ. ಇದೀಗ, ಡಿಸೆಂಬರ್ 6 ಅಥವಾ 9 ರಂದು ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ. ದರ್ಶನ್​​ ಪರ ವಕೀಲರು, ಅವರ ಆರೋಗ್ಯದ ಗಂಭೀರತೆಯನ್ನು ಹೈಕೋರ್ಟ್​​ಗೆ ಮನವಿ ಮಾಡಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್​​ ಮತ್ತು ಅವರ ತಂಡದ ವಿರುದ್ಧದ ಆರೋಪಗಳು ಈ ಚರ್ಚೆಯ ಹಿನ್ನಲೆಯಲ್ಲಿ ಮತ್ತಷ್ಟು ತೀವ್ರತೆ ಪಡೆದುಕೊಂಡಿವೆ.