Back to Top

ಪ್ರತಿಬಾರಿಯೂ ಹೆಣ್ಮಕ್ಕಳಿಂದಲೇ ದರ್ಶನ್​ಗೆ ಕಷ್ಟ! ಮತ್ತೆ ವಿವಾದದ ನಡುವೆ 'ದಾಸ'

SSTV Profile Logo SStv July 31, 2025
ದರ್ಶನ್​ಗೆ ಲೇಡಿಸ್ ಟ್ರಬಲ್
ದರ್ಶನ್​ಗೆ ಲೇಡಿಸ್ ಟ್ರಬಲ್

ನಟ ದರ್ಶನ್ ತೂಗುದೀಪ ಮತ್ತೆ ವಿವಾದದ ತಿರುಗುಬಾಣಕ್ಕೆ ಸಿಲುಕಿದ್ದಾರೆ. ಈ ಬಾರಿ ಅವರ ಅಭಿಮಾನಿಗಳಿಂದ ನಟಿ ರಮ್ಯಾಗೆ ತೀವ್ರ ಅವಹೇಳನಕಾರಿ ಮೆಸೇಜ್‌ಗಳು ಬಂದಿರುವುದಕ್ಕೆ ಸಂಬಂಧಿಸಿದಂತೆ, ರಮ್ಯಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, 40ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಅಕೌಂಟ್‌ಗಳನ್ನ ಉಲ್ಲೇಖಿಸಿದ್ದಾರೆ.

ಈ ಹಿಂದೆ ‘ಅದೃಷ್ಟದೇವತೆ ಬಂದ್ರೆ ಬಟ್ಟೆ ಬಿಚ್ಚಿಸಿ ರೂಮಲ್ಲಿ ಮಲಗಿಸ್ತೀನಿ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸದ್ದು ಮಾಡಿದ್ದ ದರ್ಶನ್, ಈಗ ಕಾಮಾಕ್ಯ ದೇವಾಲಯ ಭೇಟಿ ನೀಡಿ ಶಾಂತಿ ಅರಸಿದ್ದರೂ, ಮತ್ತೆ ಮತ್ತೊಂದು ವಿವಾದದಲ್ಲಿ ಹೆಸರು ಕೇಳಿಬರುತ್ತಿದೆ.

ದರ್ಶನ್‌ಗೂ ಮಹಿಳಾ ವಿವಾದಗಳ ಜೊತೆಗಿನ ಸಂಪರ್ಕ ಹೊಸದೇನಲ್ಲ. ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ, ಪವಿತ್ರಾ ಗೌಡ ಪ್ರಕರಣ, ನಾಯಿ ಕಚ್ಚಿದ ವಿಷಯಕ್ಕೆ ಮಹಿಳೆಯಿಂದ ಬಂದ ದೂರು, ಮಹಿಳಾ ಆಯೋಗ ನೋಟಿಸ್ – ಇವೆಲ್ಲವೂ ದರ್ಶನ್‌ಗೆ ಹಿಂದಿನ ದುರಂತಗಳನ್ನು ಸ್ಮರಿಸುತ್ತಿವೆ.

ಈ ನಡುವೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೂ ಸಂಬಂಧವಿದ್ದಂತೆ ಪವಿತ್ರಾ ಗೌಡ ಜೊತೆಗಿನ ನಂಟು, ಹತ್ಯೆಗೆ ಕಾರಣವಾಯ್ತು ಎನ್ನಲಾದ ಸಂದೇಶಗಳ ವಿಚಾರ, ಜೈಲು ಜೀವಿತ – ಇವೆಲ್ಲವು ದರ್ಶನ್ ಬದುಕಿನ ಇತ್ತೀಚಿನ ಚಾಪ್ಟರ್‌ಗಳಾಗಿವೆ.

ಅಂದಹಾಗೆ, ಜೈಲಿನಿಂದ ಬಿಡುಗಡೆಯಾದ ಬಳಿಕ ದರ್ಶನ್ ಚಾಮುಂಡಿ ಬೆಟ್ಟ, ಉಕ್ಕಡ ಮಾರಮ್ಮ ಮತ್ತು ಮಡಾಯಿಕಾವು ದೇವಾಲಯಗಳಿಗೆ ಭೇಟಿ ನೀಡಿ ಶತ್ರು ಸಂಹಾರ ಪೂಜೆ ಮಾಡಿದ್ದಾರೆ. ಆದರೆ ದೇವರ ಭಕ್ತರೂ ಆಗಿ, ಪದೇ ಪದೇ ಮಹಿಳಾ ವಿವಾದಗಳಿಂದ ಸಂಕಷ್ಟ ಎದುರಿಸುತ್ತಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.