Back to Top

"ವಿಗ್‌ನಲ್ಲಿ ಏನೂ ಕಿತ್ಕೊಳೋಕಾಗಲ್ಲ ಸರ್!" – ದರ್ಶನ್‌ಗೆ ಬಿಗ್‌ಬಾಸ್ ಪ್ರಥಮ್‌ನ ತೀವ್ರ ಟಾಂಗ್

SSTV Profile Logo SStv July 29, 2025
ದರ್ಶನ್‌ಗೆ ಬಿಗ್‌ಬಾಸ್ ಪ್ರಥಮ್‌ನ ತೀವ್ರ ಟಾಂಗ್
ದರ್ಶನ್‌ಗೆ ಬಿಗ್‌ಬಾಸ್ ಪ್ರಥಮ್‌ನ ತೀವ್ರ ಟಾಂಗ್

ಸ್ಯಾಂಡಲ್‌ವುಡ್‌ ನಟ ದರ್ಶನ್ ಹಾಗೂ ರಮ್ಯಾ ನಡುವೆ ಭುಗಿಲೆದ್ದಿರುವ ವಿವಾದದ ನಡುವೆಯೇ ಬಿಗ್‌ಬಾಸ್ ಖ್ಯಾತಿಯ ನಟ ಪ್ರಥಮ್ ಧಿಡೀರ್ ಟ್ವಿಸ್ಟ್ ನೀಡಿದ್ದಾರೆ. ಪ್ರಥಮ್ ದರ್ಶನ್ ವಿರುದ್ಧ ತೀವ್ರ ಟಾಂಗ್ ನೀಡಿದ್ದು, "ವಿಗ್‌ನಲ್ಲಿ ಏನೂ ಕಿತ್ಕೊಳೋಕಾಗಲ್ಲ ಸರ್" ಎಂಬ ಹೇಳಿಕೆ ಎಲ್ಲೆಡೆ ವೈರಲ್ ಆಗಿದೆ.

ಇದೇ ವೇಳೆ ಪ್ರಥಮ್ ತಮಗೆ ಜೀವ ಬೆದರಿಕೆ ಎದುರಾಗುತ್ತಿದೆಯೆಂದು ಆರೋಪಿಸಿ ಲಿಖಿತ ದೂರು ಸಲ್ಲಿಸಿದ್ದಾರೆ. "ನನಗೆ ತೇಜೋವಧೆ ಮಾಡ್ತಿದ್ದಾರೆ, 2000 ಪೇಜ್‌ನಲ್ಲಿ ಟ್ರೋಲ್ ಆಗ್ತಿದೆ. ನನಗೆ ಏನಾದರೂ ಆದರೆ ನೀವೇ ಕಾರಣ" ಎಂದು ಕಿಡಿಕಾರಿದ್ದಾರೆ.

ಪ್ರಥಮ್, "ಅಮರಣಾಂತ ಉಪವಾಸಕ್ಕೂ ತಯಾರಿದ್ದೇನೆ, ದರ್ಶನ್ ವಿಡಿಯೋ ಮಾಡಿ ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕು" ಎಂದಿದ್ದಾರೆ. "ನಾನು ಊರಿಗೆ ಹೋಗ್ತೀನಿ, ಬೆಂಗಳೂರು ಬಿಟ್ಟುಬಿಡ್ತೀನಿ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ರಮ್ಯಾ ಪರ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ದಂಪತಿ ಸಹ ಬೆಂಬಲ ವ್ಯಕ್ತಪಡಿಸಿ, ಮಹಿಳೆಯರಿಗೆ ಗೌರವ ನೀಡಬೇಕು ಎಂದು ಸಮಾಜಕ್ಕೆ ಬಲವಾದ ಸಂದೇಶ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲೂ ಪ್ರಥಮ್, "ನಾವು ರಮ್ಯಾ ಮೇಡಮ್ ಪರ ನಿಲ್ಲದೇ ಹೋದರೆ ಮನುಷ್ಯರಾಗಿ ನಾಚಿಕೆ ಆಗಬೇಕು" ಎಂದು ಬರೆದು, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ವಿವಾದವು ಸ್ಯಾಂಡಲ್‌ವುಡ್‌ನಲ್ಲಿ ನಿತ್ಯ ಚರ್ಚೆಯಾಗಿ ಬದಲಾಗಿದ್ದು, ಟಾಪ್ ವಿಡಿಯೋಗಳನ್ನೇ ಅಲಂಕರಿಸುತ್ತಿದೆ.