Back to Top

ದರ್ಶನ್​ ಪ್ರಕರಣ ಹಣದ ವ್ಯವಹಾರ ಕುರಿತು ಪೊಲೀಸರ ತನಿಖೆ ಗಟ್ಟಿ

SSTV Profile Logo SStv November 25, 2024
ದರ್ಶನ್ ವ್ಯವಹಾರ ಕುರಿತು ಪೊಲೀಸರ ತನಿಖೆ
ದರ್ಶನ್ ವ್ಯವಹಾರ ಕುರಿತು ಪೊಲೀಸರ ತನಿಖೆ
ದರ್ಶನ್​ ಪ್ರಕರಣ ಹಣದ ವ್ಯವಹಾರ ಕುರಿತು ಪೊಲೀಸರ ತನಿಖೆ ಗಟ್ಟಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ದರ್ಶನ್​ ವಿರುದ್ಧ ಆರೋಪಗಳು ಗಂಭೀರವಾಗುತ್ತಿದ್ದು, ಹಣದ ವ್ಯವಹಾರಗಳಲ್ಲಿ ಅನುಮಾನಗಳು ಹುಟ್ಟಿವೆ. ಪೊಲೀಸರು ಈಗ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲನೆ ನಡೆಸಿದ್ದಾರೆ. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್, ಯೂನಿಯನ್ ಬ್ಯಾಂಕ್, ಎಚ್‌ಡಿಎಫ್‌ಸಿ, ಕೋಟಕ್‌ ಮಹೇಂದ್ರ, ಮತ್ತು ಎಸ್‌ಬಿಐ ಸೇರಿದಂತೆ ಹಲವಾರು ಬ್ಯಾಂಕ್‌ಗಳಿಂದ 14 ಆರೋಪಿಗಳ ಕೆವೈಸಿ ಮಾಹಿತಿ ಮತ್ತು ಹಣದ ವ್ಯವಹಾರಗಳ ದಾಖಲೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಹತ್ಯೆಯ ಹಿಂದಿನ ಮತ್ತು ನಂತರದ ದಿನಗಳಲ್ಲಿ ಕ್ಯಾಶ್‌ ಮತ್ತು ಆನ್‌ಲೈನ್ ಮೂಲಕ ದೊಡ್ಡ ಮೊತ್ತದ ಹಣದ ವರ್ಗಾವಣೆ ನಡೆದಿರೋದು ತನಿಖೆಯ ಪ್ರಮುಖ ಭಾಗವಾಗಿದೆ. ದರ್ಶನ್ ಅವರು ಹತ್ಯೆ ಮುಚ್ಚಿ ಹಾಕಲು ಹಣ ನೀಡಿರುವ ಆರೋಪ ಎದುರಿಸುತ್ತಿದ್ದು, ಈ ಹಣದ ಮೂಲವನ್ನ ಹಿಡಿಯಲು ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆರೋಪಿಗಳ ಮೋಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಲಿಂಕ್‌ ಖಾತೆಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಈ ಹಣದ ವ್ಯವಹಾರಗಳ ದಾಖಲೆಗಳಿಂದ ಹೊಸ ಮಾಹಿತಿ ಹೊರಬರುವ ಸಾಧ್ಯತೆ ಇದ್ದು, ಇದು ದರ್ಶನ್ ಅವರಿಗೆ ಮತ್ತೆ ಸಂಕಷ್ಟ ತರಬಹುದು ಎಂದು ಶಂಕಿಸಲಾಗಿದೆ.