“ಬಟ್ಟೆ ಬಿಚ್ಚಿಸಿ ಮಲಗಿಸ್ತೀನಿ ಎಂದವರು ಈಗ ದೇವರಿಗೆ ವಂದನೆ” – ದರ್ಶನ್ ವಿರುದ್ಧ ಪ್ರಥಮ್ ಟಾಂಗ್!


ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಇತ್ತೀಚೆಗೆ ಆಸಾಮ್‌ನ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಈ ಬಗ್ಗೆ ನಟ ಪ್ರಥಮ್ ವ್ಯಂಗ್ಯಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಹಿಂದಿನ ಒಂದು ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿ, ಈಗ ದೇವರಿಗೆ ಕೈಮುಗಿಯುತ್ತಿರುವ ಸ್ಥಿತಿಗೆ ಟಾಂಗ್ ನೀಡಿದಂತಾಗಿದೆ.
“ಅದೃಷ್ಟದೇವತೆ ಬಂದ್ರೆ ಬಟ್ಟೆ ಬಿಚ್ಚಿಸಿ ರೂಮಿಗೆ ಮಲಗಿಸ್ತೀನಿ ಎಂದವರು ಈಗ ದೇವರಿಗೆ ನಮಸ್ಕಾರ ಮಾಡ್ತಿದ್ದಾರೆ,” ಎಂದು ಪ್ರಥಮ್ ಕಟು ಟಿಪ್ಪಣಿ ಮಾಡಿದ್ದಾರೆ. ಈ ಹೇಳಿಕೆ ದರ್ಶನ್ ಒಮ್ಮೆ ನೀಡಿದ ಸಂದರ್ಶನದ ಮಾತನ್ನು ಸೂಚಿಸುತ್ತಿದ್ದು, ಇದೀಗ ದೇವಸ್ಥಾನ ಭೇಟಿಯ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ನಟಿ ರಮ್ಯಾಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ, ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ವಾಗ್ವಾದ ನಡೆಯುತ್ತಿದೆ. ಈ ಟಾಂಗ್‌ಗಳಿಂದಾಗಿ ಅಭಿಮಾನಿಗಳ ನಡುವೆ ಮತ್ತೆ ಚರ್ಚೆಗೆ ಕಾರಣವಾಗುತ್ತಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
