“ಜನ ಎಷ್ಟು ಕೆಳಕ್ಕೆ ತಳ್ಳಿದ್ರೂ ದೇವರು ಕಾಪಾಡ್ತಾನೆ” – ದರ್ಶನ್ ಪತ್ನಿ ವಿಜಯಲಕ್ಷ್ಮೀ ಖಡಕ್ ಪೋಸ್ಟ್


ನಟ ದರ್ಶನ್ ಜಾಮೀನಿನ ವಿಚಾರಣೆ ನ್ಯಾಯಾಲಯದಲ್ಲಿ ಚರ್ಚೆಯಲ್ಲಿರುವ ಹೊತ್ತಿನಲ್ಲಿ, ಅವರ ಪತ್ನಿ ವಿಜಯಲಕ್ಷ್ಮೀ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಿಯಿಂದ ದೇವರ ದರ್ಶನ ಪಡೆದಿದ್ದಾರೆ. ಇದೇ ವೇಳೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದು ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ – “ಜನ ಎಷ್ಟು ಕೆಳಕ್ಕೆ ತಳ್ಳಿದ್ರೂ ದೇವರು ಉನ್ನತ ಸ್ಥಾನಕ್ಕೆ ಎಳೆಯುತ್ತಾನೆ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ” ಎಂದು ಹೇಳಿದ್ದಾರೆ.
ಇದನ್ನು ಡಿ ಬಾಸ್ ಅಭಿಮಾನಿಗಳು ಭಾರೀ ಬೆಂಬಲಿಸುತ್ತಿದ್ದಾರೆ. ಇತ್ತ ಸೆಲೆಬ್ರಿಟಿಗಳು ಮತ್ತು ದರ್ಶನ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಯುದ್ಧ ಮುಂದುವರೆದಿದೆ.
ರೆಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 7 ಆರೋಪಿಗಳಿಗೆ ಜಾಮೀನಿನ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಕೋರ್ಟ್ ಕಡೆಯಿಂದ ಕೇಳಿದ ಪ್ರಶ್ನೆಗಳು ಡಿ ಗ್ಯಾಂಗ್‌ಗೆ ಬೇಲ್ ಟೆನ್ಷನ್ ಹೆಚ್ಚಿಸಿದೆ.
ಇದೇ ವೇಳೆ ನಟಿ ರಮ್ಯಾ ಮೇಲೂ ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆಕೆಯ ಹೇಳಿಕೆ ಪಡೆಯಲಾಗಿದೆ. “ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೇನೆ, ದರ್ಶನ್ ಅಭಿಮಾನಿಗಳು ಈ ರೀತಿ ಮಾಡದಂತೆ ಅವರು ಮೊದಲೇ ಹೇಳಿದ್ದರೆ ಈ ಹತ್ಯೆ ನಡೆದೇ ಇರಿತ್ತಿತ್ತು” ಎಂದು ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
