ದರ್ಶನ್ ಜಾಮೀನು ವಿಚಾರಣೆ ಮುಂದೂಡಿಕೆ – ಜುಲೈ 24ಕ್ಕೆ ಮುಂದಾದ ತೀರ್ಪು!


ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನು ರದ್ದತಿ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಇಂದು ತೀರ್ಪು ನಿರೀಕ್ಷಿಸಲಾಗಿತ್ತು. ಆದರೆ, ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಗೈರಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ಜುಲೈ 24ಕ್ಕೆ ಮುಂದೂಡಲಾಗಿದೆ.
ದರ್ಶನ್ ಪರವಾಗಿ ನ್ಯಾಯಾಲಯದಲ್ಲಿ ಸಿದ್ದಾರ್ಥ್ ಧವೆ ವಾದ ಮಂಡನೆ ಮಾಡಿದರು. ಆದರೆ, ನ್ಯಾಯಪೀಠವು ಹೈಕೋರ್ಟ್ ನೀಡಿದ್ದ ಜಾಮೀನು ಆದೇಶದ ಪ್ರಕ್ರಿಯೆ ಕುರಿತ ಆಕ್ಷೇಪ ವ್ಯಕ್ತಪಡಿಸಿ, ಇಬ್ಬರ ವಕೀಲರಿಗೂ ಲಿಖಿತ ವಾದ ಮಂಡನೆ ಸಲ್ಲಿಸಲು ಸೂಚನೆ ನೀಡಿದೆ. ಇದರ ಜೊತೆಗೆ ದರ್ಶನ್ ವಿರುದ್ಧದ ಹಳೆಯ ಕೇಸ್‌ಗಳ ದಾಖಲೆಗಳನ್ನು ಕೂಡ ಸಲ್ಲಿಸುವಂತೆ ಹೇಳಲಾಗಿದೆ.
ಈ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರ ಪೀಠ ನಡೆಸಿದ್ದು, ಇದೀಗ ತೀರ್ಪು ಮುಂದೂಡಿಕೆಯಾದ್ದರಿಂದ, ದರ್ಶನ್ ಗ್ಯಾಂಗ್‌ಗೆ ತಾತ್ಕಾಲಿಕ ಉಸಿರಾಟ ಸಿಕ್ಕಂತಾಗಿದೆ. ಆದರೂ, ಜುಲೈ 24 ಅವರ ಭವಿಷ್ಯ ತೀರ್ಮಾನಿಸುವ ನಿರ್ಣಾಯಕ ದಿನವಾಗಲಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
