ದರ್ಶನ್ ಜಾಮೀನು ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್ – ಸರ್ಕಾರದ ಮೇಲ್ಮನವಿ ನಿರ್ಧಾರ ಹಂತದಲ್ಲಿ


ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಸೇರಿ ಏಳು ಮಂದಿಯ ಜಾಮೀನು ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ದರ್ಶನ್ ಪರ ವಕೀಲರು ಪ್ರತಿವಾದ ಮಂಡನೆ ಮಾಡಿದ್ದು, ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾ. ಪರ್ದಿವಾಲ ಹಾಗೂ ಆರ್ ಮಹದೇವನ್ ನೇತೃತ್ವದ ಪೀಠ ಈ ಪ್ರಕರಣವನ್ನು ವೀಕ್ಷಿಸುತ್ತಿದೆ. ದರ್ಶನ್ ಆರೋಗ್ಯದ ನೆಪ, ಶೂಟಿಂಗ್ ಕಾರಣಗಳ ಅಡಿಯಲ್ಲಿ ಜಾಮೀನು ಪಡೆದುಕೊಂಡಿದ್ದು, ಈ ನಡುವೆ ಥೈಲ್ಯಾಂಡ್‌ನಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿರುವ ದೃಶ್ಯಗಳು ವೈರಲ್ ಆಗಿದ್ದವು.
‘ಡೆವಿಲ್’ ಸಿನಿಮಾ ಶೂಟಿಂಗ್ ಗ್ಯಾಪ್‌ನಲ್ಲಿಯೇ ದರ್ಶನ್ ಮತ್ತು ಚಿತ್ರತಂಡ ನೈಟ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ರಾಜ್ಯ ಸರ್ಕಾರ, ಜಾಮೀನು ರದ್ದಾಗಬೇಕೆಂದು ವಾದ ಮಂಡಿಸಿದೆ. ಇದೀಗ ದರ್ಶನ್ ಜಾಮೀನು ಭವಿಷ್ಯ ಸುಪ್ರೀಂ ಕೋರ್ಟ್ ತೀರ್ಪಿಗೆ ನಿರೀಕ್ಷೆಯಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
