Back to Top

ನೇಹಾ ಹತ್ಯೆ ಪ್ರಕರಣ: ದರ್ಶನ್ ಹೆಸರು ಉಲ್ಲೇಖಿಸಿ ಜಾಮೀನು ಕೇಳಿದ ಆರೋಪಿ ಫಯಾಜ್

SSTV Profile Logo SStv August 4, 2025
ದರ್ಶನ್ ಹೆಸರು ಉಲ್ಲೇಖಿಸಿ ಜಾಮೀನು ಕೇಳಿದ ಆರೋಪಿ ಫಯಾಜ್
ದರ್ಶನ್ ಹೆಸರು ಉಲ್ಲೇಖಿಸಿ ಜಾಮೀನು ಕೇಳಿದ ಆರೋಪಿ ಫಯಾಜ್

ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದಿಂದ ಕಳೆದರೂ, ಪ್ರಮುಖ ಆರೋಪಿ ಫಯಾಜ್‌ಗೆ ಇನ್ನೂ ಶಿಕ್ಷೆ ವಿಧೆಯಾಗಿಲ್ಲ. ಇದೀಗ, ಫಯಾಜ್ ಜಾಮೀನು ಕೇಳಿ ಕೋರ್ಟ್‌ಗೆ ಮನವಿ ಸಲ್ಲಿಸಿರುವುದು ಚರ್ಚೆಗೆ ಕಾರಣವಾಗಿದೆ.

ಅವರು "ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ಸಿಕ್ಕಿದಂತೆ, ನನಗೂ ಜಾಮೀನು ನೀಡಿ" ಎಂದು ಕೋರಿದ್ದಾರೆ. ಹುಬ್ಬಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆ.4 ರಂದು ಜಾಮೀನು ಅರ್ಜಿ ಕುರಿತು ತೀರ್ಪು ನೀಡಲಿದೆ.

ಈ ಕುರಿತು ನೇಹಾ ತಂದೆ ನಿರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇದು ತಪ್ಪು ಉದಾಹರಣೆ. ಕಲಾವಿದರು ಮತ್ತು ಪ್ರಭಾವಶಾಲಿಗಳು ಮಾದರಿ ಆಗಬೇಕು. ಆದರೆ ಇಂತಹ ಮನವಿಗಳು ಅಪಾಯಕಾರಿ ಪರಿಕಲ್ಪನೆ ಹುಟ್ಟಿಸುತ್ತವೆ" ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಸಿಐಡಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ವಿಚಾರಣಾ ಪ್ರಕ್ರಿಯೆ ಮುಂದುವರಿದಿದೆ.