Back to Top

ದರ್ಶನ್ ಹೇಳಿಕೆ ನೀಡುವ ತನಕ ಉಪವಾಸ ಸತ್ಯಾಗ್ರಹ: ಪ್ರಥಮ್ ಸತ್ತರೆ ಸಾಯ್ತಾನೆ ಎಂದರೆ ಸಾಯಲಿ ಬಿಡಿ

SSTV Profile Logo SStv July 29, 2025
ದರ್ಶನ್ ಹೇಳಿಕೆ ನೀಡುವ ತನಕ ಉಪವಾಸ ಸತ್ಯಾಗ್ರಹ
ದರ್ಶನ್ ಹೇಳಿಕೆ ನೀಡುವ ತನಕ ಉಪವಾಸ ಸತ್ಯಾಗ್ರಹ

ನಟ ಪ್ರಥಮ್ ತಮ್ಮ ಮೇಲೆ ನಡೆದ ದರ್ಶನ್ ಅಭಿಮಾನಿಗಳ ಹಲ್ಲೆ ಯತ್ನದ ವಿರುದ್ಧ ನಿಷ್ಠುರ ನಿರ್ಧಾರಕ್ಕೆ ಕೈಹಾಕಿದ್ದಾರೆ. ಅವರು ಜುಲೈ 29ರಂದು ಬೆಂಗಳೂರು ಗ್ರಾಮಾಂತರ ಎಸ್‌ಪಿ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

"ಇದು ನನ್ನ ಜೀವನದ ಬಹುದೊಡ್ಡ ನಿರ್ಧಾರ," ಎನ್ನುತ್ತಿರುವ ಪ್ರಥಮ್, ದರ್ಶನ್ ಬಂದು ಹೇಳಿಕೆ ನೀಡುವವರೆಗೆ ಒಂದು ಹನಿ ನೀರು ಕೂಡ ಕುಡಿಯುವುದಿಲ್ಲ ಎಂದು ಘೋಷಿಸಿದ್ದಾರೆ. "ಇನ್ನೊಂದು ಸಲ ಪ್ರಥಮ್ ಸಹವಾಸಕ್ಕೆ ಫ್ಯಾನ್ಸ್ ಬರಲ್ಲ ಅಂತ ದರ್ಶನ್ ಸ್ಪಷ್ಟವಾಗಿ ಹೇಳಬೇಕು" ಎಂಬುದು ಅವರ ಬೇಡಿಕೆ.

150-200 ಫೇಕ್ ಪೇಜ್‌ಗಳಲ್ಲಿ ನಡೆಯುತ್ತಿರುವ ಟ್ರೋಲ್‌ಗಳು ನಿಲ್ಲಬೇಕು, ಡಿ ಡುಬಾಕ್ ಪೇಜ್‌ಗಳನ್ನೆಲ್ಲಾ ಡಿಲೀಟ್ ಮಾಡಬೇಕು ಎಂದು ಪ್ರಥಮ್ ಒತ್ತಾಯಿಸಿದ್ದಾರೆ. "ನನಗೆ ಮಾತ್ರವಲ್ಲ, ಯಾವುದೇ ನಟರ ಬಗ್ಗೆ ಟ್ರೋಲ್ ಮಾಡಿದರೆ ಚಿತ್ರರಂಗಕ್ಕೆ ಧಕ್ಕೆ" ಎಂದು ಅವರು ಹೇಳಿದ್ದಾರೆ.

"ನಿಮ್ಮ ಬ್ಯಾರಕ್‌ನವರು ನನ್ನ ಮೇಲೆ ವೆಪನ್ ತೋರಿಸಿದ್ದಾರೆ. ನೀವೇ ಉತ್ತರ ನೀಡಬೇಕು ದರ್ಶನ್ ಸರ್!" ಎಂಬ ಎಚ್ಚರಿಕೆಯನ್ನು ಪ್ರಥಮ್ ನೀಡಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ವಿವಾದ ಮತ್ತಷ್ಟು ತೀವ್ರಗೊಳ್ಳುತ್ತಿದೆ.