Back to Top

ಶಿಕ್ಷೆ ಆಗುವ ನಂಬಿಕೆಯಿದೆ ದರ್ಶನ್​ಗೆ ಬೇಲ್ ಸಿಕ್ಕ ಬಳಿಕ ರೇಣುಕಾಸ್ವಾಮಿ ತಂದೆ ಹೇಳಿಕೆ

SSTV Profile Logo SStv December 13, 2024
ದರ್ಶನ್​ಗೆ ಬೇಲ್ ಸಿಕ್ಕ ಬಳಿಕ ರೇಣುಕಾಸ್ವಾಮಿ ತಂದೆ ಹೇಳಿಕೆ
ದರ್ಶನ್​ಗೆ ಬೇಲ್ ಸಿಕ್ಕ ಬಳಿಕ ರೇಣುಕಾಸ್ವಾಮಿ ತಂದೆ ಹೇಳಿಕೆ
ಶಿಕ್ಷೆ ಆಗುವ ನಂಬಿಕೆಯಿದೆ ದರ್ಶನ್​ಗೆ ಬೇಲ್ ಸಿಕ್ಕ ಬಳಿಕ ರೇಣುಕಾಸ್ವಾಮಿ ತಂದೆ ಹೇಳಿಕೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಈ ಕುರಿತು ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥಯ್ಯ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ವ್ಯಕ್ತಪಡಿಸಿದ್ದಾರೆ. "ಜಾಮೀನು ತಾತ್ಕಾಲಿಕವಾದದ್ದು, ವಿಚಾರಣೆ ನಂತರ ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗುತ್ತದೆ ಎಂಬ ನಂಬಿಕೆಯಿದೆ. ನಾವು ಮಗನ ಕಳೆದುಕೊಂಡು ದುಃಖದಲ್ಲಿದ್ದೇವೆ. ದರ್ಶನ್ ಜೊತೆಗೆ ಯಾವುದೇ ಮಾತುಕತೆಗೆ ಆಸಕ್ತಿಯಿಲ್ಲ" ಎಂದು ಕಾಶಿನಾಥಯ್ಯ ಹೇಳಿದ್ದಾರೆ. ಅಲ್ಲದೇ, "ನಮ್ಮ ಸೊಸೆ ಸಹನಾಗೆ ಸರ್ಕಾರ ಉದ್ಯೋಗ ನೀಡಬೇಕು" ಎಂದು ಕಾಶಿನಾಥಯ್ಯ ಸರ್ಕಾರಕ್ಕೆ ಮನವಿ ಮಾಡಿದರು. ಜಾಮೀನು ಪ್ರಶ್ನಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗುವ ಬಗ್ಗೆ ಅವರ ಕುಟುಂಬ ಚರ್ಚಿಸುತ್ತಿದೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಮತ್ತು ದರ್ಶನ್ ಎ2 ಆರೋಪಿಗಳಾಗಿದ್ದು, ರೇಣುಕಾಸ್ವಾಮಿ ಅವರನ್ನು ಹಲ್ಲೆ ನಡೆಸಿದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂಬ ಆರೋಪ ಇದೆ. ಇದೀಗ ಜಾಮೀನು ಪಡೆದ ಆರೋಪಿಗಳಿಗೆ ಮುಂದಿನ ಹಂತದಲ್ಲಿ ನ್ಯಾಯಾಲಯದ ತೀರ್ಪು ನಿರ್ಣಾಯಕವಾಗಲಿದೆ.