ವಿದೇಶಿ ಬಾತುಕೋಳಿ ಕೇಸ್: ದರ್ಶನ್ ವಿಚಾರಣೆ ಸೆಪ್ಟೆಂಬರ್ 4ಕ್ಕೆ ಮುಂದೂಡಿಕೆ


ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ವಿರುದ್ಧದ ವಿದೇಶಿ ಬಾತುಕೋಳಿ ಸಾಕುವ ಪ್ರಕರಣದಲ್ಲಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ. ಮೈಸೂರಿನ ಟಿ. ನರಸೀಪುರ ಕೋರ್ಟ್ ಸೆಪ್ಟೆಂಬರ್ 4ಕ್ಕೆ ಮುಂದಿನ ದಿನಾಂಕ ನಿಗದಿಪಡಿಸಿದೆ.
ದರ್ಶನ್ ತಮ್ಮ ಕೆಂಪಯ್ಯನಹುಂಡಿಯ ಫಾರ್ಮ್‌ಹೌಸ್ನಲ್ಲಿ ಅನುಮತಿ ಇಲ್ಲದೇ ಬಾರ್ ಹೆಡೆಡ್ ಗೂಸ್ ಎಂಬ ವಿದೇಶಿ ಬಾತುಕೋಳಿ ಸಾಕಿದ್ದ ಕಾರಣ, ಅರಣ್ಯ ಇಲಾಖೆ 2 ವರ್ಷಗಳ ಹಿಂದೆ FIR ದಾಖಲಿಸಿತ್ತು. ಈ ಪ್ರಕರಣದಲ್ಲಿ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ತೋಟದ ಮ್ಯಾನೇಜರ್ ನಾಗರಾಜು ಅವರಿಗೆ ನೋಟಿಸ್ ನೀಡಲಾಗಿದೆ.
ಈ ಹಿಂದೆ ದರ್ಶನ್ ನೀಡಿದ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಈ ವಿಷಯ ಬಹಿರಂಗವಾದ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ದಾರಿ ಮೂಡಿತ್ತು. ದರ್ಶನ್ ಪರವಾಗಿ ಹಿರಿಯ ವಕೀಲ ಬಸವಣ್ಣ ಕೋರ್ಟ್‌ಗೆ ಹಾಜರಾಗಿದ್ದರು.
ಇದೇ ದಿನ ದರ್ಶನ್ ಆಷಾಢ ಮಾಸದ ಎರಡನೇ ಶುಕ್ರವಾರದಂದು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರೊಂದಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ದೇವಸ್ಥಾನದಲ್ಲಿ ಅಭಿಮಾನಿಗಳ ಭಾರಿ ನೆರೆದಿದ್ದರಿಂದ ಕೆಲಕಾಲ ನೂಕುನುಗ್ಗಲು ಉಂಟಾಗಿತ್ತು. ಇನ್ನೊಂದೆಡೆ, ದರ್ಶನ್ ನಟನೆಯ 'ಡೆವಿಲ್' ಚಿತ್ರದ ಚಿತ್ರೀಕರಣ ಜೋರಿನಲ್ಲಿ ಸಾಗುತ್ತಿದ್ದು, ಸಿನಿಮಾ ಪ್ರಗತಿಯಲ್ಲಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
