Back to Top

ದರ್ಶನ್ ಆಸ್ಪತ್ರೆಯೊಳಗೆ ಪವಿತ್ರಾ ಜೈಲೊಳಗೆೆ ದಾಸನ ಗೆಳತಿಗೆ ಸದ್ಯಕ್ಕಿಲ್ಲ ಜಾಮೀನು, ಪರಪ್ಪನ ಅಗ್ರಹಾರವೇ ಗಟ್ಟಿ

SSTV Profile Logo SStv November 21, 2024
ದರ್ಶನ್ ಆಸ್ಪತ್ರೆಯೊಳಗೆ ಪವಿತ್ರಾ ಜೈಲೊಳಗೆೆ
ದರ್ಶನ್ ಆಸ್ಪತ್ರೆಯೊಳಗೆ ಪವಿತ್ರಾ ಜೈಲೊಳಗೆೆ
ದರ್ಶನ್ ಆಸ್ಪತ್ರೆಯೊಳಗೆ ಪವಿತ್ರಾ ಜೈಲೊಳಗೆೆ ದಾಸನ ಗೆಳತಿಗೆ ಸದ್ಯಕ್ಕಿಲ್ಲ ಜಾಮೀನು, ಪರಪ್ಪನ ಅಗ್ರಹಾರವೇ ಗಟ್ಟಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟಿ ಪವಿತ್ರಾ ಗೌಡ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಸತತವಾಗಿ ದಿನಗಳನ್ನು ಕಳೆದಿದ್ದು, ಜಾಮೀನು ಪಡೆದು ಹೊರಬರುವ ನಿರೀಕ್ಷೆಯಲ್ಲಿ ಮತ್ತೆ ನಿರಾಸೆ ಅನುಭವಿಸಿದ್ದಾರೆ. ಹೈಕೋರ್ಟ್‌ನಲ್ಲಿ ಕೇಳಿದ್ದ ಜಾಮೀನು ಅರ್ಜಿಯ ವಿಚಾರಣೆ ಮತ್ತೆ ಮುಂದೂಡಲಾಗಿದೆ. ಪವಿತ್ರಾ ಗೌಡ ಈ ಕೇಸಿನಲ್ಲಿ ಎ1 ಆರೋಪಿ ಆಗಿದ್ದು, ಕೊಲೆ ಕೇಸಿನ ಗಂಭೀರತೆಯನ್ನು ಗಮನಿಸುತ್ತ, ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಪರಪ್ಪನ ಅಗ್ರಹಾರ ಜೈಲು ಈಗಾಗಲೇ ಆಕೆಗೆ ಗಟ್ಟಿ ಆಗಿದ್ದು, ನ್ಯಾಯಾಂಗದ ಮುಂದಿನ ತೀರ್ಮಾನಕ್ಕೆ ಎಲ್ಲರ ಗಮನ ತಿರುಗಿದೆ. ಪವಿತ್ರಾ ಗೌಡ ವಿರುದ್ಧದ ಕೇಸ್ ಹಿನ್ನಲೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಪ್ರಮುಖ ಪಾತ್ರದಲ್ಲಿ ಇರೋದರಿಂದ, ಬೇಲ್ ಸಿಗೋದು ಕಷ್ಟ ಎನ್ನಲಾಗಿದೆ. ಇದರೊಂದಿಗೆ, ಆಕೆಯ ಬಿಡುಗಡೆಗೆ ಇನ್ನಷ್ಟು ಕಾನೂನು ಪ್ರಕ್ರಿಯೆಗಳು ಬೇಕಾದಂತಾಗಿದೆ.