Back to Top

ಶಸ್ತ್ರಚಿಕಿತ್ಸೆ ಮಾಡಿಸದೇ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

SSTV Profile Logo SStv December 18, 2024
ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಶಸ್ತ್ರಚಿಕಿತ್ಸೆ ಮಾಡಿಸದೇ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆನ್ನುನೋವಿನ ಶಸ್ತ್ರಚಿಕಿತ್ಸೆಗಾಗಿಯೆಂದು ಮಧ್ಯಂತರ ಜಾಮೀನು ಪಡೆದಿದ್ದ ನಟ ದರ್ಶನ್, 7 ವಾರಗಳ ಬಳಿಕ ಶಸ್ತ್ರಚಿಕಿತ್ಸೆ ಮಾಡಿಸದೇ ಬಿಜಿಎಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಬೆನ್ನುನೋವಿಗೆ ಫಿಸಿಯೋಥೆರಪಿ ಮೂಲಕವೇ ಚಿಕಿತ್ಸೆ ಪಡೆಯಲು ನಿರ್ಧರಿಸಿರುವ ದರ್ಶನ್ ಕುಟುಂಬ, ಚಿಕಿತ್ಸೆ ಮುಗಿದ ನಂತರ ಅವರನ್ನು ಮನೆಗೆ ಕರೆದೊಯ್ದಿದ್ದಾರೆ. ದರ್ಶನ್‌ 6 ವಾರಗಳ ಮಧ್ಯಂತರ ಜಾಮೀನು ಡಿ.11ಕ್ಕೆ ಮುಗಿದರೂ, ಕೋರ್ಟ್ ಅವಧಿ ವಿಸ್ತರಿಸಿತ್ತು. ಡಿ.13ರಂದು ಹೈಕೋರ್ಟ್ ನಿಂದ ದರ್ಶನ್ ಸೇರಿದಂತೆ ಎಲ್ಲಾ 7 ಆರೋಪಿಗಳಿಗೆ ರೆಗ್ಯೂಲರ್‌ ಬೇಲ್ ಮಂಜೂರು ಮಾಡಲಾಯಿತು. ಜಾಮೀನು ಸಿಕ್ಕಿದ್ದು ಹೇಗೆ ದರ್ಶನ್ ಮತ್ತು ಸಹ ಆರೋಪಿ ಪವಿತ್ರಾ ಗೌಡ ಸೇರಿದಂತೆ 7 ಜನರ ವಿರುದ್ಧ ಸಾಕಷ್ಟು ಶಂಕೆಗಳು ಮೂಡಿದ್ದರೂ, ಆಕೆಯ ಬಂಧನ ವೇಳೆ ನಿಯಮಗಳ ಲೋಪಗಳು ನಡೆದಿರುವುದಾಗಿ ಕೋರ್ಟ್‌ ಅಭಿಪ್ರಾಯಪಟ್ಟಿತು.ಸುಪ್ರೀಂ ಕೋರ್ಟ್‌ ಆದೇಶಗಳ ಪ್ರಕಾರ, ಬಂಧನಕ್ಕೆ ಸರಿಯಾದ ಕಾರಣಗಳು ನೀಡಿಲ್ಲವೆಂಬ ಕಾರಣದಿಂದ ಜಾಮೀನು ಮಂಜೂರು ಮಾಡಲಾಗಿದೆ. ದರ್ಶನ್‌ ಡಿಸ್ಚಾರ್ಜ್‌ ನಂತರ ನೇರವಾಗಿ ಪತ್ನಿ ವಿಜಯಲಕ್ಷ್ಮಿ ಅವರ ಹೊಸಕೆರೆಹಳ್ಳಿ ಫ್ಲಾಟ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.