Back to Top

" ಸು ಫ್ರಮ್ ಸೋ" ಕನ್ನಡ ಸಿನಿಮಾದ "ಡ್ಯಾಂಕ್ಸ್ ಅಂಥಮ್" ವಿಡಿಯೋ ಸಾಂಗ್ ಬಿಡುಗಡೆ

SSTV Profile Logo SStv June 28, 2025
"ಡ್ಯಾಂಕ್ಸ್ ಅಂಥಮ್" ವಿಡಿಯೋ ಸಾಂಗ್ ಬಿಡುಗಡೆ
"ಡ್ಯಾಂಕ್ಸ್ ಅಂಥಮ್" ವಿಡಿಯೋ ಸಾಂಗ್ ಬಿಡುಗಡೆ

ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಸಂಸ್ಥೆಯಲ್ಲಿ  ನಿರ್ಮಾಣಗೊಂಡ " ಸು ಫ್ರಮ್ ಸೋ" ಕನ್ನಡ ಸಿನಿಮಾದ "ಡ್ಯಾಂಕ್ಸ್ ಅಂಥಮ್" ವಿಡಿಯೋ ಸಾಂಗ್ ಬಿಡುಗಡೆ ಆಗಿ ಜನರ ಮನ ಸೆಳೆಯುತ್ತಿದೆ.ಮುಂದೆ ಎಲ್ಲಾ ಪಾರ್ಟಿ ಹಾಗು ಇತರೆ ಕಾರ್ಯಕ್ರಮದಲ್ಲಿ ಈ ಹಾಡು ಕೇಳಿಸೋದು ಕನ್ಫರ್ಮ್ ಅನ್ನಿಸುತ್ತಿದೆ.

ಈ ಹಾಡಿಗೆ ಸಾಹಿತ್ಯ ರಾಜ್ ಬಿ ಶೆಟ್ಟಿ ಅವರದ್ದು ಅನುರಾಗ್ ಕುಲಕರ್ಣಿ ಅವರು ಸೊಗಸಾಗಿ ಹಾಡಿದ್ದಾರೆ ಹಾಗು ಸುಮೇಧ್ ಕೆ ಅವರು ಉತ್ತಮ ಸಂಗೀತ ನೀಡಿದ್ದಾರೆ....ಇದರ ನೃತ್ಯ ಸಂಯ್ಯೋಜನೆಯನ್ನು ವಿನಾಯಕ ಆಚಾರ್ಯ ಮಾಡಿದ್ದಾರೆ. ಈ ಹಾಡಿನಲ್ಲಿ ಜೆಪಿ ತುಮಿನಾಡು,ಶನೀಲ್ ಗೌತಮ್,ಪ್ರಕಾಶ್ ಕೆ ತುಮಿನಾಡು,ದೀಪಕ್ ರೈ ಪಣಜೆ, ಮೈಮ್ ರಾಮದಾಸ್,ಅರ್ಜುನ್ ಕಜೆ, ಹಾಗೂ ಇತರರು ಹೆಜ್ಜೆ ಹಾಕಿದ್ದಾರೆ "ಸು ಫ್ರಮ್ ಸೋ" ಸಿನಿಮಾವನ್ನು ಜೆಪಿ ತುಮಿನಾಡು ನಟಿಸಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಎಸ್ ಚಂದ್ರಸೆಕರನ್ ಕಾರ್ಯ ನಿರ್ವಹಿಸಿದ್ದಾರೆ.

ಈ ಸಿನಿಮಾವನ್ನು  ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ, ರಾಜ್ ಬಿ ಶೆಟ್ಟಿ ಮೂವರು ಸೇರಿ ಅದ್ದೂರಿ ಯಾಗಿ ನಿರ್ಮಿಸಿದ್ದಾರೆ.. ಸಂದೀಪ್ ತುಳಸಿದಾಸ್ ಅವರ ಹಿನ್ನೆಲೆ ಸಂಗೀತ ಇರುವ ಈ ಚಿತ್ರಕ್ಕಿದೆ ಅರ್ಜುನ್ ರಾಜ್ ಸಾಹಸ ಸಂಯೋಜನೆ ಮಾಡಿದ್ದಾರೆ 
ಮಂಗಳೂರು ಸುತ್ತಮುತ್ತಲಿನ ಊರಾದ  ವೇಣೂರು , ಕಕ್ಯಪದವು ಹಾಗು ಇತರ ಕಡೆ ಸಿನಿಮಾ   50 ದಿನಗಳ ಕಾಲ ಚಿತ್ರಕರಣಗೊಂಡು ಇದೀಗ ಮುಂದಿನ ತಿಂಗಳು ಜೂಲೈ 25 ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ..