"ರೇಣುಕಾಸ್ವಾಮಿಗೂ ಇವ್ರಿಗೂ ವ್ಯತ್ಯಾಸವೇನು?" – ಡಿ ಬಾಸ್ ಫ್ಯಾನ್ಸ್ ವಿರುದ್ಧ ರಮ್ಯಾ ಕಿಡಿ!


ನಟಿ ರಮ್ಯಾ ಅವರು ದರ್ಶನ್ ಅಭಿಮಾನಿಗಳು ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದಾರೆ ಎಂದು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತೆ ಎಂಬ ಸ್ಟೇಟಸ್ ಹಾಕಿದ್ದಕ್ಕೆ, ಇವರಿಂದ ಕೆಟ್ಟ ಸಂದೇಶಗಳು ಬಂದಿವೆ ಎಂದು ರಮ್ಯಾ ತಿಳಿಸಿದ್ದಾರೆ.
"ಇವ್ರಿಗೂ ರೇಣುಕಾಸ್ವಾಮಿಗೂ ಏನು ವ್ಯತ್ಯಾಸ?" ಎಂದು ಪ್ರಶ್ನೆ ಎತ್ತಿದ ರಮ್ಯಾ, ಸೈಬರ್ ಠಾಣೆಗೆ ದೂರು ಕೊಡುವಂತೆ ಕಮಿಷನರ್ ಸೂಚಿಸಿದ್ದಾರೆಂದು ತಿಳಿಸಿದ್ದಾರೆ. ಎಲ್ಲ ಹೆಣ್ಣುಮಕ್ಕಳ ಪರವಾಗಿ ಈ ದೂರು ನೀಡಿದ್ದಾರೆ ಎಂದು ತಿಳಿಸಿ, "ಇದರಿಂದ ಸಮಾಜಕ್ಕೆ ಬಲವಾದ ಸಂದೇಶ ಹೋಗಬೇಕು" ಎಂದಿದ್ದಾರೆ.
ಚಿತ್ರರಂಗದಿಂದ ಬೆಂಬಲವಿದೆ ಎಂದು ಹೇಳಿದರೂ, ಕೆಲವು ಮಂದಿ ಬೆಂಬಲಿಸಲು ಭಯಪಡುವ ಸ್ಥಿತಿ ಇದೆ ಎಂದು ರಮ್ಯಾ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ಹಿಂದೆಯೂ ಯಶ್ ಮತ್ತು ಸುದೀಪ್ ಬಗ್ಗೆ ಪೋಸ್ಟ್ ಮಾಡಿದಾಗ ಸಹ ತರಾಟೆಗೆ ಗುರಿಯಾಗಿದ್ದ ಬಗ್ಗೆ ತಿಳಿಸಿದ್ದಾರೆ.
ನ್ಯಾಯಕ್ಕಾಗಿ ಹೋರಾಡುತ್ತಿರುವೆ ಎಂಬ ನಿಲುವು ಹೊಂದಿರುವ ರಮ್ಯಾ, ನಟ ಪ್ರಥಮ್ ಕೂಡ ಬೆದರಿಕೆ ಕುರಿತು ದೂರು ನೀಡಬಹುದು ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
