Back to Top

ಕರ್ಲಿ ಹೇರ್ ಸ್ಟೈಲ್‌ನಲ್ಲಿ ಕಿಚ್ಚ ಸುದೀಪ್: ಹೊಸ ಲುಕ್ ಫ್ಯಾನ್ಸ್‌ಗಾಗಿ ಸರ್‌ಪ್ರೈಸ್!

SSTV Profile Logo SStv August 4, 2025
ಕರ್ಲಿ ಹೇರ್ ಸ್ಟೈಲ್‌ನಲ್ಲಿ ಕಿಚ್ಚ ಸುದೀಪ್
ಕರ್ಲಿ ಹೇರ್ ಸ್ಟೈಲ್‌ನಲ್ಲಿ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ತಮ್ಮ ಹೊಸ ಲುಕ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಮೊದಲ ಬಾರಿಗೆ ಕರ್ಲಿ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವ ಸುದೀಪ್ ಅವರ ಫೋಟೋಗಳು ವೈರಲ್ ಆಗಿವೆ. ಸ್ಟೈಲಿಶ್ ಲುಕ್‌ಗಾಗಿ ಹೆಸರಾಗಿರುವ ಕಿಚ್ಚ, ಈ ಬಾರಿಯೂ ತಮ್ಮ ಫ್ಯಾನ್ಸ್‌ನ್ನು ಆಕರ್ಷಿಸುತ್ತಿದ್ದಾರೆ.

ಈ ಹೊಸ ಲುಕ್ ಅವರು ನಟಿಸುತ್ತಿರುವ ‘ಕಿಚ್ಚ 47’ ಸಿನಿಮಾಗೆ ಸಂಬಂಧಿಸಿದದ್ದು. ತಮಿಳು ನಿರ್ದೇಶಕ ವಿಜಯ್ ಕಾರ್ತಿಕ್ ಅವರ ನಿರ್ದೇಶನದಲ್ಲಿ, ಸತ್ಯಜ್ಯೋತಿ ಫಿಲಂಸ್ ನಿರ್ಮಾಣದ ಈ ಚಿತ್ರದಲ್ಲಿ ಸುದೀಪ್ ‘ಮುತ್ತತ್ತಿ ಸತ್ಯರಾಜು’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ನಿಶ್ಚಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ಹಿಂದೆ ‘ಹೆಬ್ಬುಲಿ’, ‘ದಿ ವಿಲನ್’, ‘ರಾಜು ಕನ್ನಡ ಮೀಡಿಯಂ’ ಸಿನಿಮಾಗಳಲ್ಲಿ ವಿಭಿನ್ನ ಹೇರ್ ಸ್ಟೈಲ್‌ಗಳಿಂದ ಗಮನ ಸೆಳೆದಿದ್ದ ಸುದೀಪ್, ಇದೀಗ ಕರ್ಲಿ ಹೇರ್ ಮೂಲಕ ಮತ್ತೊಮ್ಮೆ ಫ್ಯಾಷನ್‌ ಸೆನ್ಸೇಶನ್ ಆಗಿದ್ದಾರೆ.