'ಕೂಲಿ' ಚಿತ್ರದಲ್ಲಿ ರಚಿತಾ ರಾಮ್ ಸರ್ಪ್ರೈಸ್ ಎಂಟ್ರಿ – ಡಿ ಗ್ಲಾಮರ್ ಲುಕ್‌ನಲ್ಲಿ ಹೊಸ ರೂಪ!


ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ 'ಕೂಲಿ' ಚಿತ್ರದಲ್ಲಿ ಕನ್ನಡದ ಚೆಲುವೆ ರಚಿತಾ ರಾಮ್ ಸಡನ್ ಎಂಟ್ರಿ ನೀಡಿದ್ದಾರೆ. ಟ್ರೈಲರ್ ಬಿಡುಗಡೆಯಾದ ಬಳಿಕ ರಚಿತಾ ರಾಮ್ ಪಾತ್ರದ ಝಲಕ್ ಬಹಿರಂಗವಾಗಿದ್ದು, ಅವರು ಡಿ ಗ್ಲಾಮರ್ ಲುಕ್‌ನಲ್ಲಿ, ಕೈಯಲ್ಲಿ ಫೈಲ್ ಹಿಡಿದು ಭಯಭೀತ ಮುಖಭಾವದೊಂದಿಗೆ ಕಾಣಿಸಿಕೊಂಡಿದ್ದಾರೆ.
ಈ ಪಾತ್ರ ಪಾಸಿಟಿವ್‌ನಾ ಅಥವಾ ನೆಗೆಟಿವ್ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸರಳ ಉಡುಪಿನಲ್ಲಿ ಅವರ ಎಮೋಷನಲ್ ಎಕ್ಸ್‌ಪ್ರೆಶನ್‌ಗಳು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿವೆ.
ಲೋಕೇಶ್ ಕನಕರಾಜ್ ನಿರ್ದೇಶನದ ಈ ಮಲ್ಟಿ-ಸ್ಟಾರ್ ಸಿನಿಮಾ ಆಕ್ಷನ್ ಹಾಗೂ ಥ್ರಿಲ್ ಮಿಕ್ಸ್ ಆಗಿದ್ದು, ರಜನಿಕಾಂತ್ ಜೊತೆ ಉಪೇಂದ್ರ, ನಾಗಾರ್ಜುನ್, ಶೃತಿ ಹಾಸನ್, ಆಮೀರ್ ಖಾನ್ ಸಹ ಅಭಿನಯಿಸಿದ್ದಾರೆ. ‘ಕೂಲಿ’ ಆಗಸ್ಟ್ 14ರಂದು ತೆರೆಗೆ ಬರಲಿದ್ದು, ಟ್ರೈಲರ್ ಜೊತೆಗೇ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಮೂಡಿಸಿದೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
