"ದರ್ಶನ್ ರೌಡಿ ಆಗಬೇಕಿತ್ತು, ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ"; ಕಂಟೆಂಟ್ ಕ್ರಿಯೇಟರ್ ಸೋನುಗೆ ಡಿ ಬಾಸ್ ಅಭಿಮಾನಿಗಳ ಕಾಟ!


ಇತ್ತೀಚೆಗೆ ಕನ್ನಡದ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿರುವ ವಿಚಾರವೊಂದೆಂದರೆ, ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿ ಅವರಿಗೆ ನಟ ದರ್ಶನ್ ಅಭಿಮಾನಿಗಳಿಂದ ಬಂದಿರುವ ತೀವ್ರ ಪ್ರತಿಕ್ರಿಯೆ. "ದರ್ಶನ್ ರೌಡಿ ಆಗಬೇಕಿತ್ತು, ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ" ಎಂಬ ಸೋನು ಶೆಟ್ಟಿಯ ಅಭಿಪ್ರಾಯ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯಿಂದ ಕೋಪಗೊಂಡ ಅಭಿಮಾನಿಗಳು ಅಶ್ಲೀಲ ಸಂದೇಶಗಳು, ಬೆದರಿಕೆಗಳು ಮತ್ತು ಕೆಟ್ಟ ಕಾಮೆಂಟ್‌ಗಳ ಮೂಲಕ ಪ್ರತಿಸ್ಪಂದಿಸಿದ್ದಾರೆ.
ಸೋನು ಶೆಟ್ಟಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದು, "ನಾನು ದರ್ಶನ್ ಹೆಸರನ್ನು ಬಳಸಿಕೊಂಡು ಪಬ್ಲಿಸಿಟಿ ಮಾಡುವವನಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ. ಅವರು ತಮ್ಮ ಇನ್‌ಬಾಕ್ಸ್ ಹಾಗೂ ಕಮೆಂಟ್ ಬಾಕ್ಸ್‌ಗಳಲ್ಲಿ ಬಂದಿರುವ ಅಶ್ಲೀಲ ಹಾಗೂ ಅವಾಚ್ಯ ಮೆಸೇಜ್‌ಗಳ ವಿವರಗಳನ್ನು ತೋರಿಸುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಸದ್ಯ ಅವರು ತಮ್ಮ ಕಮೆಂಟ್ ಬಾಕ್ಸ್ ಅನ್ನು ಆಫ್ ಮಾಡಿರುವುದು ಸ್ಪಷ್ಟ ಸಂಕೇತವಾಗಿದೆ – ಪರಿಸ್ಥಿತಿ ಎಷ್ಟು ತೀವ್ರವಾಗಿದೆಯೆಂಬುದಕ್ಕೆ. ಇದರ ಹಿಂದೆಯೂ ಇದೇ ರೀತಿಯ ಘಟನೆ ನಡೆದಿದೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ತಮ್ಮ ನೇರ ಅಭಿಪ್ರಾಯ ಹೇಳಿದ ಬಳಿಕ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶಗಳನ್ನು ಪಡೆದಿದ್ದರು. ಇತ್ತೀಚೆಗಿನ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಕುರಿತು ನುಡಿದಿದ್ದು, ಕೆಲವು ಅಭಿಮಾನಿಗಳಿಗೆ ನುಂಗದಂತಾಗಿದೆ. ಈ ಸಂಬಂಧ ರಮ್ಯಾ ನೀಡಿದ ದೂರು ಆಧಾರದ ಮೇಲೆ ಈಗಾಗಲೇ ನಾಲ್ಕು ಮಂದಿ ಬಂಧನವಾಗಿದ್ದಾರೆ.
ಪ್ರತಿಭಟನೆಗೆ ಹಕ್ಕಿದೆಯಾದರೂ, ಆಕ್ರೋಶವನ್ನು ಗದರಿಕೆ ಮತ್ತು ಅವಾಚ್ಯ ಪದಗಳಲ್ಲಿ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದ ಸಂಸ್ಕೃತಿಗೆ ವಿರುದ್ಧವಾಗಿದೆ. ಒಬ್ಬ ನಟನ ಅಭಿಮಾನಿಯಾಗಿರಬಹುದು, ಆದರೆ ಅಭಿಮಾನಿತ್ವದ ಹೆಸರಿನಲ್ಲಿ ಇತರರನ್ನು ನಿಂದಿಸುವ ಹಕ್ಕು ಯಾರಿಗೂ ಇಲ್ಲ. ನಟರು ತಮ್ಮ ಪರವಾಗಿ ಪ್ರತಿಕ್ರಿಯೆ ನೀಡದಿದ್ದರೂ, ಅವರ ಹೆಸರಿನಲ್ಲಿ ಇತರರನ್ನು ಗುರಿಯಾಗಿಸುವ ಅಭಿಮಾನಿಗಳು ದೌರ್ಜನ್ಯ ಮಾಡುವ ಹಂತ ತಲುಪಿದರೆ, ಅದು ಸಾಮಾಜಿಕವಾಗಿ ಆತಂಕಕಾರಿ ಬೆಳವಣಿಗೆಯಾಗುತ್ತದೆ.
ಸೋಶಿಯಲ್ ಮೀಡಿಯಾ, ಅಭಿಪ್ರಾಯ ಹಂಚಿಕೊಳ್ಳಲು ವೇದಿಕೆಯಾಗಿದರೂ, ಅದನ್ನು ಗದರಿಕೆ ಮತ್ತು ದ್ವೇಷ ಮಾಡುವುದು ಅಕ್ಷಮ್ಯ. ಪ್ರತಿ ಅಭಿಮಾನಿಯಿಗೂ ತಮ್ಮ ಮೇಲಿನ ಪ್ರೀತಿ ವ್ಯಕ್ತಪಡಿಸುವ ಹಕ್ಕಿದೆ, ಆದರೆ ಅದರ ಜೊತೆ ಜವಾಬ್ದಾರಿ ಕೂಡ ಬರುತ್ತದೆ. ಅಭಿಮಾನಿ ಹಾಗೂ ನಾಗರಿಕ ಈ ಎರಡು ಪಾತ್ರಗಳ ನಡುವಣ ಸಮತೋಲನ ಕಾಯ್ದುಕೊಳ್ಳುವುದೇ ಇಂದಿನ ಅವಶ್ಯಕತೆ.
Trending News
ಹೆಚ್ಚು ನೋಡಿವಿಷ್ಣುವರ್ಧನ್ ಸಿನಿಮಾಗೆ ಡೈರೆಕ್ಷನ್ ಕೊಡಬೇಕಿತ್ತಾ ರಮೇಶ್ ಅರವಿಂದ್? ಮಿಸ್ ಆದ ಆ ಅಪರೂಪದ ಅವಕಾಶ!

ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್: ರಿಷಬ್ ಶೆಟ್ಟಿ ನಿಜಕ್ಕೂ ಮಾಸ್ಟರ್ಪೀಸ್ ಎಂದ ಸಿಂಗರ್
