Back to Top

‘ಎಕ್ಕ’ ಸಿನಿಮಾ ಬಿಡುಗಡೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಯುವ ರಾಜ್‌ಕುಮಾರ್ ಹಾಗೂ ಚಿತ್ರತಂಡ!

SSTV Profile Logo SStv July 12, 2025
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ‘ಎಕ್ಕ’ ಟೀಂ
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ‘ಎಕ್ಕ’ ಟೀಂ

ರಾಜ್ಯಾದ್ಯಾಂತ ನಿರೀಕ್ಷೆ ಮೂಡಿಸಿರುವ ‘ಎಕ್ಕ’ ಸಿನಿಮಾದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿರುವ ಈ ಸಂದರ್ಭದಲ್ಲಿ, ಚಿತ್ರದ ನಾಯಕ ನಟ ಯುವ ರಾಜ್‌ಕುಮಾರ್ ಹಾಗೂ ನಿರ್ಮಾಪಕರಾದ ಕಾರ್ತಿಕ್ ಗೌಡ, ಜಯಣ್ಣ, ಯೋಗಿ ಜಿ.ರಾಜ್ ಮತ್ತು ಇತರ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಡೆದಿದೆ.

‘ಎಕ್ಕ’ ಚಿತ್ರದ ಟ್ರೇಲರ್ (ಜುಲೈ 11) ಬಿಡುಗಡೆಯಾಗಿದ್ದು, ಪಬ್ಲಿಕ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ “ಬ್ಯಾಂಗಲ್ ಬಂಗಾರಿ” ಹಾಡು ಕೂಡಾಗಲೇ ಹಿಟ್ ಆಗಿದ್ದು, ಸಿನಿಮಾ ಕುರಿತು ಭಾರಿ ನಿರೀಕ್ಷೆ ಉಂಟುಮಾಡಿದೆ. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರವು ಜುಲೈ 18ರಂದು ತೆರೆಗೆ ಬರಲಿದೆ.

ಇದು ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಅವರ ಎರಡನೇ ಸಿನಿಮಾ. ಈ ಚಿತ್ರದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಕಾರ್ತಿಕ್ ಗೌಡ ಹಾಗೂ ಜಯಣ್ಣ ಅವರು ಬಂಡವಾಳ ಹೂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಚಿತ್ರದ ತಂಡಕ್ಕೆ ಶುಭ ಹಾರೈಸಿದ್ದು, ಚಿತ್ರದ ಪ್ರಚಾರಕ್ಕೆ ಹೊಸ ಶಕ್ತಿ ಸಿಕ್ಕಂತಾಗಿದೆ.