Back to Top

ಸಿನಿಮಾ ಟಿಕೆಟ್‌ ದರಕ್ಕೆ ಕಡಿವಾಣ: 200 ರೂ. ಮೀರಬಾರದು ಎಂದು ಸರ್ಕಾರದ ಆದೇಶ

SSTV Profile Logo SStv July 16, 2025
ಸಿನಿಮಾ ಟಿಕೆಟ್‌ ದರಕ್ಕೆ ಕಡಿವಾಣ
ಸಿನಿಮಾ ಟಿಕೆಟ್‌ ದರಕ್ಕೆ ಕಡಿವಾಣ

ರಾಜ್ಯದಲ್ಲಿ ಸಿನಿಮಾ ಟಿಕೆಟ್‌ ಬೆಲೆ ಭಾರಿಯಾಗಿದ್ದದಕ್ಕೆ ರಾಜ್ಯ ಸರ್ಕಾರ ಕೊನೆಗೂ ಕಡಿವಾಣ ಹಾಕಿದೆ. ಇನ್ಮುಂದೆ ಎಲ್ಲಾ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 200 ರೂಪಾಯಿಗೆ ಮಿತವಾಗಿರಬೇಕು ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ನಿಯಮ ಕನ್ನಡ ಮಾತ್ರವಲ್ಲದೇ ಎಲ್ಲ ಭಾಷೆಯ ಸಿನಿಮಾಗಳಿಗೂ ಅನ್ವಯವಾಗಲಿದೆ. 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಈ ನಿರ್ಧಾರದ ಬಗ್ಗೆ ಉಲ್ಲೇಖಿಸಲಾಗಿತ್ತು. ಇದೀಗ ಅಧಿಕೃತ ಆದೇಶದಿಂದ ಸಿನಿಪ್ರಿಯರಿಗೆ ನಿರೀಕ್ಷಿತ ಸಿಕ್ಕಿದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚಾಗಿರುವ ಟಿಕೆಟ್ ದರ ಸಾರ್ವಜನಿಕರನ್ನು ಚಿತ್ರಮಂದಿರಗಳಿಂದ ದೂರ ಮಾಡಿತ್ತು. OTT ಪ್ಲಾಟ್‌ಫಾರ್ಮ್‌ಗಳ ಪ್ರಭಾವವೂ ಹೆಚ್ಚಾಗಿ, ಸಿನಿಮಾ ವೀಕ್ಷಣೆಗೆ ಜನರು ಮನೆಯಲ್ಲೇ ತೃಪ್ತರಾಗಿದ್ದರು. ಈ ಹೊಸ ಆದೇಶದಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯಲ್ಲೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಕ್ರಮದಿಂದ ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ, ಪ್ರೇಕ್ಷಕರಿಗೆ ಶುಭವಾರ್ತೆ ಎನ್ನಬಹುದಾಗಿದೆ.